ಸ್ವಸಹಾಯ ಸಂಘಗಳ ದಿನ ಆಚರಿಸಿ

cm meet
Published on

ಬೀದರ್: ನವೆಂಬರ್ 1ರಿಂದ 11ರವರೆಗೆ ಸ್ವಸಹಾಯ ಸಂಘಗಳ ದಿನ ಆಚರಿಸಬೇಕೆಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ ಅವರು, ಬೀದರ್ ಡಿಸಿಸಿ ಬ್ಯಾಂಕ್ ಸ್ವಸಹಾಯ ಗುಂಪುಗಳ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ಸ್ವಸಹಾಯ ಗುಂಪುಗಳ ಮಾದರಿ ಜಿಲ್ಲೆ ಎಂದೇ ಗುರುತಿಸಲ್ಪಟ್ಟಿದೆ. ಬ್ಯಾಂಕಿನ ಅಧ್ಯಕ್ಷರಾಗಿದ್ದ ದಿ. ಡಾ.ಗುರುಪಾದಪ್ಪ  ನಾಗಮಾರಪಳ್ಳಿ ಕಾಳಜಿ ಫಲವಾಗಿ ಸ್ವಸಹಾಯ ಗುಂಪುಗಳು ಬೃಹತ್ತಾಗಿ ಬೆಳೆದು ಸಾಮಾಜಿಕ, ಆರ್ಥಿಕ ಬದಲಾವಣೆಗೆ ಕಾರಣವಾಗಿವೆ ಎಂದು ಗಮನ ಸೆಳೆದಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ನ.1ರಿಂದ 11ರವರೆಗೆ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ವಸಹಾಯ ಸಂಘಗಳ ದಿನ ಆಚರಿಸುತ್ತ ಬರಲಾಗಿದೆ. ಮಕ್ಕಳ ದಿನ, ಶಿಕ್ಷಕರ ದಿನ ಮಾದರಿಯಲ್ಲಿ ಸ್ವಸಹಾಯ ಸಂಘಗಳ ದಿನ ಆಚರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಬಡ, ಅನಕ್ಷರಸ್ಥ ಮಹಿಳೆಯರು ಆರ್ಥಿಕ ಸ್ವಾವಲಂಬಿಯಾಗಿ ಗೌರವಪೂರ್ಣ ಬದುಕು ಸಾಗಿಸಲು ಸ್ವಸಹಾಯ ಸಂಘಗಳೇ ಕಾರಣವಾಗಿವೆ. ಸ್ವಸಹಾಯ ಸಂಘಗಳ ಆಂದೋಲನ ಇನ್ನಷ್ಟು ವ್ಯಾಪಕವಾಗಿ ಬೆಳೆಯಲು ರಾಜ್ಯಾದ್ಯಂತ ನ.1ರಿಂದ 11ರವರೆಗೆ ಸ್ವಸಹಾಯ ಸಂಘಗಳ ದಿನ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ದಯಾನಂದ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net