

ಸೇಡಂ: ಭಾರತ ವಿಕಾಸ ಸಂಗಮದಿಂದ 2025 ಜ.29 ರಿಂದ ಫೆ.6ವರೆಗೆ ನಡೆಯಲಿರುವ 7ನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸ್ವರ್ಣ ಜಯಂತಿ ಕಾರ್ಯಕ್ರಮದ ಸ್ವಾಗತ ಸಮಿತಿಗಳ ಅನಾವರಣ ಕಾರ್ಯಕ್ರಮ ಗುರುವಾರ ಆಯೋಜಿಸಲಾಗಿದೆ ಎಂದು ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಅಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಹಾವೇರಿಯ ಶ್ರೀ ಸದಾಶಿವ ಸ್ವಾಮೀಜಿ, ವಿಜಯಪುರದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹೊಸಪೇಟೆ-ಹಾಲಕೇರಿಯ ಕೊಟ್ಟುರೇಶ್ವರ ಸಂಸ್ಥಾನದ ಜಗದ್ಗುರು ಶ್ರೀ ಕೊಟ್ಟುರು ಬಸವಲಿಂಗ ಸ್ವಾಮೀಜಿ ಉದ್ಘಾಟಿಸುವರು. ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಸಂರಕ್ಷಕ ಡಾ.ಬಸವರಾಜ ಪಾಟೀಲ್ ಸೇಡಂ ಪ್ರೇರಣಾ ನುಡಿಗಳನ್ನಾಡುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುರುಮಠಕಲ್‌ನ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಟೆಂಗಳಿಯ ಶ್ರೀ ಡಾ.ಶಾಂತಸೋಮನಾಥ ಶಿವಾಚಾರ್ಯರು, ತೊಟ್ನಳ್ಳಿಯ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರು, ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ, ಮಳಖೇಡದ ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರು, ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಮಂಠಾಳದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ನೇತೃತ್ವ, ಶ್ರೀ ಸಂಗಮೇಶ್ವರ ಸ್ವಾಮೀಜಿ, ಮಳಖೇಡ ಉತ್ತಾರಾದಿ ಮಠದ ಪಂ.ವೆAಕಣ್ಣಾಚಾರ್ಯ, ಸಿಂಧನಮಡುವಿನ ಶ್ರೀ ಸಂತೋಷ ಮಹಾರಾಜ, ಹೂಡಾದ ಶ್ರೀ ಮರೆಪ್ಪ ಪೂಜಾರಿ, ಸೈಯ್ಯದ್ ಶಹಾ ಮುಸ್ತಫಾ ಖಾದ್ರಿ ಸಮ್ಮುಖ ವಹಿಸುವರು ಎಂದರು.
ಸೇಡಂ ತಾಲೂಕಿನ ನೀಲಹಳ್ಳಿ ಗ್ರಾಮದ ಸಮೀಪದ 200 ಎಕರೆ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಹಾಗೂ ಕೊತ್ತಲ ಸ್ವರ್ಣ ಜಯಂತಿ ಕಾರ್ಯಕ್ರಮ ಐತಿಹಾಸಿಕವಾಗಿ ಆಯೋಜಿಸಲಾಗುತ್ತಿದ್ದು, ಈಗಾಗಲೇ ಸಿದ್ಧತೆ ಆರಂಭವಾಗಿವೆ. ಕಾರ್ಯಕ್ರಮ ಯಶಸ್ವಿಯ ಭಾಗವಾಗಿ ಸಂಸ್ಥೆ ಹಿರಿಯ ವಿದ್ಯಾರ್ಥಿಗಳ, 15 ದತ್ತು ಗ್ರಾಮಗಳ ಮೂರು ಸ್ವಾಗತ ಸಮಿತಿ ಅನಾವರಣಗೊಳಿಸಲಾಗುತ್ತಿದೆ. ಸೆ.3ರಂದು ಇನ್ನೆರಡು ಸಮಿತಿ ರಚನೆಗೊಳ್ಳಲಿದೆ ಎಂದು ಹೇಳಿದರು.
ಪ್ರಮುಖರಾದ ಅನುರಾಧ ಪಾಟೀಲ್, ಶಂಕರ ಸುಲೇಗಾಂವ್, ಸಿದ್ದಪ್ಪ ತಳ್ಳಳ್ಳಿ, ವಿಶ್ವನಾಥ ಕೋರಿ, ಜಗದೀಶ ಕಡಬಗಾಂವ್ ಇದ್ದರು.