ಸ್ವರೂಪ್ ಪರ ಜೆಡಿಎಸ್ ಮುಖಂಡರಿಂದ ಪ್ರಚಾರ

ಸ್ವರೂಪ್ ಪರ ಜೆಡಿಎಸ್ ಮುಖಂಡರಿಂದ ಪ್ರಚಾರ
Published on

ಹಾಸನ : ನಗರದ 5ನೇ ವಾರ್ಡ್ ಸುತ್ತಮುತ್ತ ಜೆಡಿಎಸ್ ಮುಖಂಡರಾದ ಎಂ.ಕೆ. ಕಮಲ್ ಕುಮಾರ್ ಮತ್ತು ನಗರಸಭೆ ಸದಸ್ಯರಾದ ಹೇಮಾವತಿ ಕಮಲ್ ಕುಮಾರ್ ರವರು ಜೆಡಿಎಸ್ ಅಭ್ಯರ್ಥಿ ಎಚ್.ಪಿ. ಸ್ವರೂಪ್ ಪರ ಶುಕ್ರವಾರ ಮತ ಯಾಚನೆ ಮಾಡಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕಮಲ್ ಕುಮಾರ್ ಅವರು, ನಗರಸಭೆ ವ್ಯಾಪ್ತಿಯ 5ನೇ ವಾರ್ಡಿನಲ್ಲಿ ಸದಸ್ಯರಾದ ಹೇಮಾವತಿ ಕಮಲ್ ಕುಮಾರ್ ನೇತೃತ್ವದಲ್ಲಿ ಜಾತ್ಯತೀತ ಜನತಾ ದಳದ ಪರವಾಗಿ ಪಕ್ಷದ ಅಭ್ಯರ್ಥಿ ಎಚ್.ಪಿ. ಸ್ವರೂಪ್ ಪ್ರಕಾಶ್ ಪರವಾಗಿ ಮತ ಯಾಚನೆ ಮಾಡಲಾಗುತ್ತಿದೆ. ದೇವೇಗೌಡರ ಕುಟುಂಬದ ಮತ್ತು ದಿವಂಗತ ಎಚ್.ಎಸ್. ಪ್ರಕಾಶ್ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಗುತ್ತಿದೆ ಎಂದರು.
ನಮ್ಮ ಅಭ್ಯರ್ಥಿ ಎಚ್.ಪಿ. ಸ್ವರೂಪ್ ಪರ ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದು, ಹಾಸನ ಜಿಲ್ಲೆ ಅಭಿವೃದ್ಧಿ ಹೊಂದಬೇಕೆಂದರೆ ಅದು ಎಚ್.ಡಿ. ರೇವಣ್ಣರವರ ನಾಯಕತ್ವದಲ್ಲಿ ಮಾತ್ರ ಸಾಧ್ಯ. ಕುವೆಂಪು ನಗರ, ಬೀರನಹಳ್ಳಿ, ಎಸ್.ಜೆ.ಪಿ. ರಸ್ತೆಯ ಕ್ರಿಶ್ಚನ್ ಕಾಲೋನಿಯ ಭಾಗಗಳಲ್ಲಿ ಮತ ಯಾಚನೆ ಮಾಡಲಾಗುತ್ತಿದೆ. ಎಚ್.ಪಿ. ಸ್ವರೂಪ್ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net