ಸ್ವರಾಜ್ 8200 ಹಾರ್ವೆಸ್ಟಿಂಗ್ ಯಂತ್ರ ಬಿಡುಗಡೆ

Swaraj 8200 Harvesting Machine, Muddebihala, Swaraj Tractor,
ಮುದ್ದೇಬಿಹಾಳದ ಮದರಿ ಕಲ್ಯಾಣ ಮಂಟಪದಲ್ಲಿ ಸ್ವರಾಜ್ ಟ್ರಾೃಕ್ಟರ್ ಕಂಪನಿಯ ನೂತನ 8200 ಹಾರ್ವೆಸ್ಟರ್ ಮಷಿನ್- ವಾಹನವನ್ನು ಜಂಟಿ ಕೃಷಿ ನಿರ್ದೇಶಕ ಡಾ.ರಾಜಶೇಖರ ವೀಲಿಯಮ್ಸ್ ಉದ್ಘಾಟಿಸಿದರು. ಪಿಯುಷ್ ಕೌಶಿಕ್, ರಿಶಿರಾಜ್ ಭೂಯಾನ್, ಶಿವಾನಂದ ಹೂಗಾರ, ಅರವಿಂದ ಹೂಗಾರ, ಶರಣು ಉಣ್ಣಿಬಾವಿ ಇದ್ದರು.
Published on

ಮುದ್ದೇಬಿಹಾಳ: ಹಲವು ಕಂಪನಿಗಳ ಹಾರ್ವೆಸ್ಟರ್ ಯಂತ್ರಗಳ ಗುಣಮಟ್ಟಕ್ಕಿಂತ ಸ್ವರಾಜ್ ಕಂಪನಿಯ ಹಾರ್ವೆಸ್ಟರ್ ಯಂತ್ರ ಒಳ್ಳೆಯದಾಗಿದೆ ಎಂದು ವಿಜಯಪುರ ಕೃಷಿ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್ ಹೇಳಿದರು.

ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಬುಧವಾರ ಸ್ವರಾಜ್ ಟ್ರಾೃಕ್ಟರ್ ಕಂಪನಿಯ ನೂತನ 8200 ಹಾರ್ವೆಸ್ಟರ್ ಮಷಿನ್ ಹಾಗೂ ವಾಹನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರೈತರ ಮೆಚ್ಚುಗೆಗೆ ಪಾತ್ರವಾಗಿರುವ ಕಂಪನಿಗಳಲ್ಲಿ ಸ್ವರಾಜ್ ಕಂಪನಿ ಕೂಡ ಒಂದಾಗಿದೆ. ಇದೀಗ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಹಾರ್ವೆಸ್ಟಿಂಗ್ ಮಷಿನ್ ಬಿಡುಗಡೆ ಮಾಡಿರುವುದು ರೈತರಿಗೆ ವರದಾನವಾಗಲಿದೆ. ಈ ಭಾಗದಲ್ಲಿ ತೊಗರಿ ಬೆಳೆ ಹೆಚ್ಚು ಇರುವುದರಿಂದ ಈ ಯಂತ್ರ ರೈತರಿಗೆ ಸಹಾಯಕವಾಗಲಿದೆ ಎಂದು ಹೇಳಿದರು.

ಸ್ವರಾಜ್ ಕಂಪನಿಯ ಹಿರಿಯ ವ್ಯವಸ್ಥಾಪಕ ಪಿಯುಷ್ ಕೌಶಿಕ್ ಮಾತನಾಡಿ, ಹಲವು ರಿಯಾಯಿತಿಗಳನ್ನು ಹೊಸದಾದ ಸ್ವರಾಜ್ ಹಾರ್ವೆಸ್ಟಿಂಗ್ ಯಂತ್ರ ಒಳಗೊಂಡಿದೆ. ರೈತರಿಗೆ ಇದು ಅನುಕೂಲ ಆಗಲಿದೆ ಎಂಬ ಭಾವನೆ ನಮ್ಮದು ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಂಪನಿ ಉಪ ವ್ಯವಸ್ಥಾಪಕ ರಿಶಿರಾಜ್ ಭೂಯಾನ್, ಸಹಾಯಕ ಕೃಷಿ ಉಪನಿರ್ದೇಶಕ ಪ್ರಕಾಶ ಚವ್ಹಾಣ, ತೋಟಗಾರಿಕೆ ಸಹಾಯಕ ನಿರ್ದೇಶಕ ರಾಘವೇಂದ್ರ ದೇಶಪಾಂಡೆ, ಬ.ಬಾಗೇವಾಡಿ ಕೃಷಿ ಅಧಿಕಾರಿ ಅರವಿಂದ ಹೂಗಾರ, ಭೋಗೇಶ್ವರ ಕೃಷಿ ಕೇಂದ್ರದ ಮುಖ್ಯಸ್ಥ ಶಿವಾನಂದ ಹೂಗಾರ, ಮುದ್ದೇಬಿಹಾಳ ಭೋಗೇಶ್ವರ ಕೃಷಿ ಕೇಂದ್ರದ ಮುಖ್ಯಸ್ಥ ಶರಣು ಉಣ್ಣಿಬಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net