

ಚಿಕ್ಕಮಗಳೂರು: ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಕಲೆ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಹಾಗೂ ಗುರುಪರಂಪರೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಾಂಸ್ಕೃತಿಕ ಚಿಂತಕ ಸ.ಗಿರಿಜಾ ಶಂಕರ್ ತಿಳಿಸಿದರು.
ನಗರದ ಬಸವನಹಳ್ಳಿ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಗುರುಕೃಪ ಸಂಗೀತ ಸೇವಾ ಟ್ರಸ್ಟ್ನಿಂದ ಆಯೋಜಿಸಲಾಗಿದ್ದ ಸ್ವರ ಮಾಧುರ್ಯ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀಗುರುಕೃಪ ಸಂಗೀತ ಸೇವಾ ಸಂಸ್ಥೆ ನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಕ್ರಿಯಾಶೀಲ ಸಂಸ್ಥೆಯಾಗಿ ಹೊರಹೊಮ್ಮಿ ಹೆಚ್ಚು ಹೆಚ್ಚು ಶಿಷ್ಯ ಬಳಗವನ್ನು ಹೊಂದುವAತಾಗಲಿ ಎಂದು ಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿ ಹಾಗೂ ನಾಡಿನ ಗಾಯಕ ಸುರೇಂದ್ರ ರೆಡ್ಡಿ ಮಾತನಾಡಿ, ಗುರಂಪರೆಯನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾದಾಗ ಮಾತ್ರ ಸಂಸ್ಥೆಗಳು ಉಳಿಯುತ್ತವೆ. ಕೇವಲ ಮೂರು ನಾಲ್ಕು ಸಂಗೀತ ಸಂಸ್ಥೆಗಳಿAದ ಒಳಗೊಂಡಿದ್ದ ನಮ್ಮ ಜಿಲ್ಲೆಯಲ್ಲಿ ಇಂದಿಗೆ ೧೫ಕ್ಕೂ ಹೆಚ್ಚು ಸಂಸ್ಥೆಗಳು ಇಲಾಖೆಯಿಂದ ಸಹಾಯ ಧನವನ್ನು ಪಡೆಯುತ್ತಿವೆ. ಆಸಕ್ತಿ ಉಳ್ಳವರು ಮಧುರ ಸಂಸ್ಥೆಯನ್ನು ಪ್ರಾರಂಭಿಸಿ ಇಲಾಖೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.
ಕಲ್ಯಾಣ ನಗರ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮಹೇಶ್, ಸಂಸ್ಥೆ ಸದಸ್ಯ ಪೂರ್ಣೇಶ್, ಪ್ರಮುಖರಾದ ಮಲ್ಲಿಗೆ ಸುಧೀರ್, ಶೈಲಜಾ ಎಸ್.ನಾಯಕ್, ನಾಗರಾಜರಾವ್ ಕಲ್ಕಟ್ಟೆ ಮತ್ತಿತರರಿದ್ದರು.