ಸ್ವಯಂ‌ ಉದ್ಯೋಗದಿಂದ‌ ನಿರುದ್ಯೋಗ ನಿವಾರಣೆ

21 kgl photo 2...
Published on

ಚಾಮರಾಜನಗರ: ಸ್ವಯಂ ಉದ್ಯೋಗದಿಂದ ನಿರುದ್ಯೋಗ ‌ನಿವಾರಣೆಯಾಗಲಿದೆ ಎಂದು ಮಹಾರಾಣಿ ಕಲಾ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕ ಡಾ.ಎನ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟರು.

ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ ವಿಭಾಗದ ವತಿಯಿಂದ ದಿ.ಎಚ್.ಆರ್.ಕೆ. ಸ್ಮರಣಾರ್ಥ ವಿಶ್ವ ಜನಸಂಖ್ಯೆ ದಿನಾಚರಣೆ ಪ್ರಯುಕ್ತ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಕೌಟಿಲ್ಯ ಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ದೇಶದ ಜನಸಂಖ್ಯೆ ಮಾನವ ಸಂಪನ್ಮೂಲವಾಗಿ, ಮಾನವ ಬಂಡವಾಳವಾಗಿ ಪರಿವರ್ತನೆಯಾದಾಗ ಯಾವುದೇ ಸಮಸ್ಯೆ ಉಲ್ಬಣವಾಗುವುದಿಲ್ಲ. ದೇಶವನ್ನು ಬಾಸುತ್ತಿರುವ ನಿರುದ್ಯೋಗ ಸಮಸ್ಯೆ ತೊಲಗಿಸಲು ಸ್ವಯಂಉದ್ಯೋಗ ಅಗತ್ಯ ಎಂದರು.

ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲೆ ಪ್ರೊ.ಬಿ.ಜಯಲಕ್ಷ್ಮೀ, ಅಧ್ಯಾಪಕ ಡಾ.ಸುಂದರಮೂರ್ತಿ, ಡಾ.ವೇಣುಗೋಪಾಲ್, ಪ್ರೊ.ನಂಜುಂಡಸ್ವಾಮಿ, ಪ್ರೊ.ಮಹದೇವಯ್ಯ, ಡಾ.ಸುಧಾ ಜಿ.ಮೋಹನ್, ಪ್ರಭು, ವ್ಯವಸ್ಥಾಪಕ ಮಹಾದೇವ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net