ಸ್ವಯಂ ಸೇವಕರಿಂದ ಸಹಕಾರ ಪಡೆಯುವಂತೆ ಎಸಿ ಮನವಿ

11sirsi1
Published on

ಶಿರಸಿ: ಶಿರಸಿ ಉಪವಿಭಾಗದ ಸಾರ್ವಜನಿಕರು ಈವರೆಗೆ ಲಾಕ್​ಡೌನ್ ಹಿನ್ನೆಲೆಯಲ್ಲಿ ಒಳ್ಳೆಯ ರೀತಿಯಿಂದ ಸ್ಪಂದಿಸಿದ್ದು, ಇನ್ನು ಮುಂದೆಯೂ ಮನೆಯಿಂದ ಹೊರಬರದೇ ಸಹಕರಿಸುವಂತೆ ಇಲ್ಲಿನ ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಮತ್ತು ಡಿವೈಎಸ್​ಪಿ ಜಿ.ಟಿ.ನಾಯಕ ಜಂಟಿಯಾಗಿ ವಿನಂತಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿರಸಿ ಪೊಲೀಸ್.ಇನ್ ಲಿಂಕ್​ನಲ್ಲಿ ಉಪವಿಭಾಗದ ಮಾಹಿತಿ ಹಾಗೂ ಅನೇಕ ಸಂಘಟನೆಯ ಸ್ವಯಂ ಸೇವಕರ, ಮನೆಮನೆಗೆ ಉಚಿತವಾಗಿ ದಿನಸಿ ಮತ್ತು ಔಷಧ ಮತ್ತು ಅಗತ್ಯ ಜೀವನಾವಶ್ಯಕ ಸಾಮಾನುಗಳನ್ನು ತಲುಪಿಸುತ್ತಿರುವವರ ದೂರವಾಣಿ ಸಂಖ್ಯೆಯ ಮಾಹಿತಿ ನೀಡಲಾಗಿದೆ. ಇನ್ನು ಹೆಚ್ಚಿನ ಜನರು ನಿಮ್ಮ ಆರೋಗ್ಯದ ದೃಷ್ಟಿಯಿಂದ ಸಣ್ಣಪುಟ್ಟ ವಿಷಯಕ್ಕೆ ಮನೆಯಿಂದ ಹೊರ ಬರದೇ ಶಿರಸಿ ಪೊಲೀಸ್.ಇನ್​ನಲ್ಲಿಯ ಮಾಹಿತಿ ಮತ್ತು ಉಚಿತವಾಗಿ ಮನೆ ಮನೆ ತಲುಪಿಸುತ್ತಿರುವ ಸ್ವಯಂ ಸೇವಕರ ಸಹಕಾರ ಪಡೆದುಕೊಳ್ಳಬೇಕಾಗಿ ಕೋರಿದ್ದಾರೆ.

ಉಪವಿಭಾಗದ ಸಾರ್ವಜನಿಕರು ಸಣ್ಣಪುಟ್ಟ ಔಷಧ ಮತ್ತು ದಿನಸಿ ಸಾಮಗ್ರಿ ಖರೀದಿಗೆ ದೂರದ ಹಳ್ಳಿಯಿಂದ ಪಟ್ಟಣಕ್ಕೆ ಬರುತ್ತಿದ್ದಾರೆ. ಹೀಗೆ ಸಣ್ಣಪುಟ್ಟ ವಿಷಯಕ್ಕೆ ಬರದೇ ಶಿರಸಿ ಪೊಲೀಸ್ ಲಿಂಕ್​ನಲ್ಲಿ ಸ್ವಯಂ ಸೇವಕ ಸಂಘಟನೆಯವರಿಗೆ ಕರೆ ಮಾಡಿ ಸಾರ್ವಜನಿಕರು ಇದರ ಸಹಾಯ ಪಡೆದುಕೊಳ್ಳಬೇಕು. ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲೂಕಿನ ಮಾಹಿತಿ ಈ ಶಿರಸಿ ಪೊಲೀಸ್ ಲಿಂಕ್ ನಲ್ಲಿ ಅಳವಡಿಸಲಾಗಿದೆ. ಶಿರಸಿಯ ಪೊಲೀಸ್ ಲಿಂಕ್​ನಲ್ಲಿ ನೀಡಿದ ಸಂಘಟಕರು ಲಾಕ್​ಡೌನ್ ಯಶಸ್ಸು ಗೊಳಿಸಲು ಪೊಲೀಸ್ ಮತ್ತು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಸಾರ್ವಜನಿಕರು ದೂರವಾಣಿ ಕರೆಮಾಡಿ ಸಹಾಯ ಕೇಳಿದಲ್ಲಿ ಅಂತಹವರ ಮನೆಮನೆಗೆ ಯಾವುದೇ ಲಾಭದ ನಿರೀಕ್ಷೆ ಇಲ್ಲದೇ ಉಚಿತವಾಗಿ ನೀಡುತ್ತಿದ್ದಾರೆ. ಈವರೆಗೆ ಮನೆಯಿಂದ ಹೊರಬರದೇ ಉಪವಿಭಾಗದ ಸಾರ್ವಜನಿಕರು ಮನೆಯಿಂದಲೇ ದೂರವಾಣಿ ಕರೆ ಮಾಡಿ, ಅಗತ್ಯ ವಸ್ತುಗಳ ಸೇವೆಯನ್ನು ಪಡೆದುಕೊಂಡು ಲಾಕ್​ಡೌನ್ ಯಶಸ್ವಿಗೊಳಿಸಲು ಇಲಾಖೆಯೊಂದಿಗೆ ಕೈಜೋಡಿಸುವಂತೆ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net