ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ

24 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಎಸ್‌ಡಿಎಂ ಆಸ್ಪತ್ರೆ ರಕ್ತ ಭಂಡಾರ (ಪೆಥಾಲಜಿ ವಿಭಾಗ) ಹಾಗೂ ಫ್ರೀ ಮಸನ್ಸ ಲಾಡ್ಜ ಸಹಯೋಗದಲ್ಲಿ ವಿಶ್ವ ಬಂಧುತ್ವ ದಿನದ ನಿಮಿತ್ತ ಆಸ್ಪತ್ರೆಯಲ್ಲಿ ಶನಿವಾರ ರಕ್ತದಾನ ಶಿಬಿರ ನಡೆಸಲಾಯಿತು.
ಅತಿಥಿಯಾಗಿ ಆಗಮಿಸಿದ್ದ ಎಸ್‌ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ ಮಾತನಾಡಿ, ಪಿತೃತ್ವ ಮತ್ತು ಭ್ರಾತೃತ್ವದ ಪರಿಕಲ್ಪನೆ ಸಮಾಜಕ್ಕೆ ಸೇವೆ ಸಲ್ಲಿಸಲು ಉತ್ತಮ ಸಾಧನಗಳಾಗಿವೆ. ಬಂಧುತ್ವದ ದಿನದಂದು ರಕ್ತದಾನ ಮಾಡುವುದು ಉತ್ತಮ. ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠ. ಪ್ರತಿಯೊಬ್ಬರೂ ತಮ್ಮ ಅವಶ್ಯಕತೆಗಿಂತ ಹೆಚ್ಚಿಗೆ ಇರುವ ಸಂಪತನ್ನು ಇತರರಿಗೆ ದಾನಮಾಡುವ ಮನೋಭಾವ ಬೆಳೆಸಿಕೊಂಡು ಅದರಲ್ಲಿ ತೃಪ್ತಿ ಕಾಣಬೇಕು ಎಂದರು.
ಫ್ರೀ ಮಸನ್ಸ ಲಾಡ್ಜ್‌ನ ಆರಾಧನಾ ಗುರುಗಳಾದ ರಾಮನಾಥ ಕೆ. ಹೆಗ್ಡೆ, ಸದಸ್ಯರಾದ ಯಶಕರನ್‌ಸಿಂಗ್ ಅವರು ಸಂಘದ ಧ್ಯೇಯ, ಉದ್ದೇಶ ಮತ್ತು ಕಾರ್ಯದ ಬಗ್ಗೆ ವಿವರಿಸಿದರು. ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿ ಡಾ. ಎಸ್.ಕೆ.ಜೋಶಿ, ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹಗ್ಡೆ, ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ. ವಿಧಿಶಾ ಅಥಣಿಕರ, ಇತರರು ಇದ್ದರು.
ಡಾ. ನಹೀದಾ ಎ.ಎಸ್. ಸ್ವಾಗತಿಸಿದರು. ಡಾ. ವಿದ್ಯಾ ನಿರೂಪಿಸಿದರು. ಲೆ. ಕರ್ನಲ್ ಡಾ. ಯು.ಎಸ್. ದಿನೇಶ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net