ಸ್ವಯಂ ಉದ್ಯೋಗಿ, ಉದ್ದಿಮೆದಾರರಾಗಿ

CTDSJMAIT ---
Published on

ಚಿತ್ರದುರ್ಗ: ಉದ್ಯೋಗಕ್ಕಾಗಿ ಸೀಮಿತರಾಗದೇ ಸ್ವಯಂ ಉದ್ಯೋಗಿ, ಉದ್ದಿಮೆದಾರರಾಗುವತ್ತ ಗಮನ ಹರಿಸುವಂತೆ ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಸ್‌ಜೆಎಂಐಟಿಯಲ್ಲಿ ಮಂಗಳವಾರ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗ ಹಾಗೂ ಉದ್ಯಮಶೀಲತೆ ಘಟಕದ ಸಹಯೋಗದಲ್ಲಿ ಉದ್ಯಮಶೀಲತೆ ಮನಸ್ಥಿತಿ ಹಾಗೂ ಕೌಶಲ್ಯಗಳು ಕುರಿತ ಉಪನ್ಯಾಸ ಕಾರ‌್ಯಕ್ರಮದಲ್ಲಿ ಮಾತನಾಡಿ, ಸ್ವಂತ ಉದ್ಯಮದ ಮೂಲಕ ಹಲವರಿಗೆ ಉದ್ಯೋಗಾವಕಾಶ ಕಲ್ಪಿಸುವುದರೊಂದಿಗೆ ಸ್ವಾವಲಂಬಿ ಬದುಕನ್ನು ನಡೆಸಬಹುದಾಗಿದೆ. ಸ್ವಯಂ ಉದ್ಯೋಗಕ್ಕೆ ಸರ್ಕಾರಗಳ ವಿವಿಧ ಯೋಜನೆಗಳಡಿ ಲಭ್ಯವಿರುವ ಆರ್ಥಿಕ ನೆರವನ್ನು ಪಡೆದುಕೊಳ್ಳಬೇಕೆಂದರು.

ತುಮಕೂರು ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಸಿ.ಪ್ರವೀಣ್ ಕುಮಾರ್ ಮಾತನಾಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಉದ್ಯಮ ಸ್ಥಾಪಿಸಲು ತರಬೇತಿ ಕಾರ‌್ಯಕ್ರಮಗಳನ್ನು ಆ ಯೋಜಿಸಲಾಗುತ್ತಿದೆ. ಯುವಜನರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ನಿರುದ್ಯೋಗ ಸಮಸ್ಯೆಯಿಂದ ಹೊರಬರ ಬೇ ಕೆಂದರು.

ಸಹಾಯಕ ಪ್ರಾಧ್ಯಾಪಕಿ ಪ್ರೊ.ಎಂ.ರೂಪಾ ಮಾತನಾಡಿದರು. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪಿ. ಕುಮಾರ್, ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ.ಸಿದ್ದೇಶ್, ಐಕ್ಯುಎಸಿ ಸಂಚಾಲಕ ಡಾ.ಎ.ಎಂ.ರಾಜೇಶ್, ಸಂಚಾಲಕರಾದ ಪ್ರೊ. ಎಂ.ಕೆ.ಸುದರ್ಶನ್, ಪ್ರೊ.ವಿ.ಆರ್.ಸಂದೀಪ್ ಮತ್ತಿತರರು ಇದ್ದರು. ವೆನ್ನಲಾ ಸ್ವಾಗತಿಸಿ, ರಕ್ಷಿತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net