ಸ್ವಯಂ ಉದ್ಯೋಗದಿಂದ ಸ್ವಾವಲಂಬಿ

CTD VASAVI
Published on

ಚಿತ್ರದುರ್ಗ: ಮಹಿಳೆಯರು ಸ್ವ-ಉದ್ಯೋಗಿಗಳಾಗುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕೆಂದು ಅಖಿಲ ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾ ಸಭಾದ ಅಧ್ಯಕ್ಷೆ ಉಮಾ ಸಾಯಿರಾಂ ಹೇಳಿದರು.
ವಾಸವಿ ಮಹಿಳಾ ಸಂಘದಿಂದ ನಗರದ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗಕ್ಕೆ ಮುಂದಾಗುವಂತೆ ಸಲಹೆ ನೀಡಿದರು.
ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎ.ಸತ್ಯನಾರಾಯಣಶೆಟ್ಟಿ, ಸಮಾರಂಭ ಉದ್ಘಾಟಿಸಿದ ಆರ್ಯವೈಶ್ಯ ಸಂಘದ ಉಪಾಧ್ಯಕ್ಷ ಎಂ.ಎಚ್.ಮಂಜುನಾಥ್, ಸಂಘದ ಅಧ್ಯಕ್ಷೆ ಸರ್ವದಾ ಸುರೇಶ್‌ಗುಪ್ತ ಮಾತನಾಡಿದರು.
ಉಪಾಧ್ಯಕ್ಷೆ ಲಕ್ಷ್ಮೀ ರಮಾಕಾಂತ್, ಕಾರ‌್ಯದರ್ಶಿ ಸುಧಾ ಮಂಜುನಾಥ್, ಖಜಾಂಚಿ ಗಾಯತ್ರಿ ರಾಜಗೋಪಾಲ್, ಸಹ ಕಾರ‌್ಯದರ್ಶಿ ಗೀತಾ ಅಶ್ವಥನಾರಾಯಣ, ನಿರ್ದೇಶಕರಾದ ಕೆ.ಎಂ.ಗಾಯತ್ರಿ ಮಂಜುನಾಥಶೆಟ್ಟಿ, ವಾಣಿ ಆನಂದ್, ಲಕ್ಷ್ಮೀ ಶ್ರೀನಿವಾಸ್, ಎಲ್.ಎ.ಚೈತ್ರಾ ಅಜಯ್, ಸುನಿತಾ ರಾಧಾಕೃಷ್ಣ, ಸುಧಾ ಗೋವಿಂದರಾಜು, ಸ್ವರ್ಣಲತಾ ರಾಜು, ಅನಸೂಯ ಸಾಯಿರಾಂ, ಜ್ಯೋತಿಮಂಜುನಾಥ್, ಸವಿತಾ ಸುಬ್ರಮಣ್ಯ, ಆರ್.ಎನ್.ಸ್ವರ್ಣರಾಜ್, ಅರ್ಚನಾ ಗುರುರಾಜ್, ರೂಪಾ ವಿನಯ್, ಸಲಹೆಗಾರರಾದ ಸುಧಾ ನಾಗರಾಜ್, ಪ್ರತಿಭಾ ವಿಶ್ವನಾಥ್, ಟಿ.ವಿ.ಸುರೇಶ್‌ಗುಪ್ತ, ಪಿ.ಎಲ್.ಸುರೇಶ್‌ರಾಜು, ನಿಕಟ ಪೂರ್ವ ಅಧ್ಯಕ್ಷೆ ಸುಮಾ ಅನಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net