

ನಂಜನಗೂಡು: ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಸಂಪರ್ಕ ಸಭೆ, ಸ್ವಯಂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರನಾಯಕ ಉದ್ಘಾಟಿಸಿದರು.
ಪ್ರಾಂಶುಪಾಲ ಡಾ.ಟಿ.ಆರ್.ಸಿದ್ದರಾಜು ಮಾತನಾಡಿ, ಯುವಪೀಳಿಗೆಗೆ ಎಲ್ಲ ಕ್ಷೇತ್ರಗಳ ಬಗ್ಗೆ ಜ್ಞಾನವಿರಬೇಕು. ಬಡತನದಲ್ಲಿರುವ ಯುವಕರು ಸ್ವಯಂ ಉದ್ಯೋಗ ರೂಪಿಸಿಕೊಂಡು ಆರ್ಥಿಕವಾಗಿ ಮುನ್ನಡೆಯಬೇಕು. ಬಹುತೇಕ ಯುವಕರು ವಿದ್ಯಾಭ್ಯಾಸ ಮುಗಿಸಿದ್ದರೂ ಉದ್ಯೋಗ ಮನೆಯಲ್ಲೇ ಇದ್ದಾರೆ. ಕೆಲವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಸರ್ಕಾರ ಸ್ವಯಂ ಉದ್ಯೋಗ ಕಲ್ಪಿಸಿಕೊಡುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಯುವ ಸಬಲೀಕರಣ ಇಲಾಖೆಯ ಮೇಲ್ವಿಚಾರಕರಾದ ರಕ್ಷಿತ್, ಹರೀಶ್, ಪ್ರೌಢಶಾಲೆಯ ಉಪ ಪ್ರಾಂಶುಪಾಲ ರಘು, ಗ್ರಾಪಂ ಸದಸ್ಯರಾದ ಮಂಜುನಾಥ್, ನವೀನ್, ಮುಖಂಡರಾದ ಕವಲಂದೆ ರಾಹುಲ್, ಗಟ್ಟವಾಡಿ ಸೋಮಯ್ಯ, ಎಸ್‌ಡಿಎಂಸಿ ಅಧ್ಯಕ್ಷ ನಜಿಬುಲ್ಲಾಖಾನ್, ಶಿವಕುಮಾರ್ ಇದ್ದರು.