ಸ್ವಯಂ ಉದ್ಯೋಗ ಸೃಜಿಸಲು ಸ್ಟಾರ್ಟ್ ಅಫ್

15 ckm 5
ಚಿಕ್ಕಮಗಳೂರಿನ ಎಐಟಿ ಕಾಲೇಜು ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕೈಗಾರಿಕಾ ಕೇಂದ್ರ, ಕೆಸಿಟಿಯು, ಕೆಎಸ್‌ಎಂಸಿ ಅಂಡ್ ಎ ಹಾಗೂ ಎಐಟಿ ಆಶ್ರಯದಲ್ಲಿ ಅಂತಿಮ ವರ್ಷದ ಎಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಅರಿವು ಕಾರ್ಯಾಗಾರವನ್ನು ಚೇಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಶಾಂತಾರಾಮ್ ಹೆಗಡೆ ಉದ್ಘಾಟಿಸಿದರು. ಡಾ.ಸಿ.ಟಿ.ಜಯದೇವ, ಸಿ.ಎಂ.ಮಹೇಶ್ ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸ್ವಯಂ ಉದ್ಯೋಗ ಸೃಜಿಸುವ ದೃಷ್ಟಿಯಿಂದ ಸ್ಟಾರ್ಟ್ಅಫ್ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಾಂತರಾಮ್ ಹೆಗಡೆ ತಿಳಿಸಿದರು.

ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕೈಗಾರಿಕಾ ಕೇಂದ್ರ, ಕೆಸಿಟಿಯು, ಕೆಎಸ್‌ಎಂಸಿ ಅಂಡ್ ಎ ಹಾಗೂ ಎಐಟಿ ಆಶ್ರಯದಲ್ಲಿ ಅಂತಿಮ ವರ್ಷದ ಎಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ರ‍್ಯಾಂಪ್ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ ೨ ಇನ್‌ಕ್ಯೂಬೇಶನ್ ಅರಿವು ಕಾರ್ಯಾಗಾರ ನಡೆಸಬೇಕು ಎಂಬ ಸೂಚನೆಯಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಐಟಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ಶೇ. ೬೦ರಷ್ಟು ಜನ ಕೃಷಿ ಅವಲಂಭಿಸಿದ್ದಾರೆ. ಮುಂದಿನ ಯುವಪೀಳಿಗೆ ಕೃಷಿ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಪಿಯು ಶಿಕ್ಷಣ ಮುಗಿದ ಕೂಡಲೆ ಬೆಂಗಳೂರಿಗೆ ಪಯಣ ಬೆಳೆಸುತ್ತಾರೆ. ಹೀಗಾಗಿ ಉದ್ಯೋಗ ಸೃಷ್ಟಿಮಾಡಬೇಕು ಎಂಬ ಸದುz್ದೆÃಶದಿಂದ ಸ್ಟಾರ್ಟ್ಅಪ್‌ಗಳು ಕೈಗಾರಿಕೆಗಳ ಮೂಲಕ ಸ್ವಯಂ ಉದ್ಯೋಗ ಸೃಷ್ಟಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಹೇಳಿದರು.

ಶಿಕ್ಷಣ ಮುಗಿದ ಮೇಲೆ ಎಲ್ಲಿ, ಯಾರನ್ನು ಸಂಪರ್ಕಿಸಿ ಸ್ವ-ಉದ್ಯೋಗ ಹೇಗೆ ಸೃಷ್ಟಿಮಾಡಬಹುದು ಎಂಬ ಬಗ್ಗೆ ಈ ಕಾರ್ಯಾಗಾರದಲ್ಲಿ ಮಾಹಿತಿ ದೊರೆಯಲಿದೆ. ಇದು ಮುಂದೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕೈಗಾರಿಕೆ ಆರಂಭಿಸಿದವರೆಲ್ಲಾ ಮೊದಲೇ ದೊಡ್ಡ ಉದ್ದಿಮೆ ಸ್ಥಾಪಿಸಿದವರಲ್ಲ. ಸಣ್ಣಪುಟ್ಟ ಕೈಗಾರಿಕೆಗಳಿಂದ ಮುಂದೆ ದೊಡ್ಡ ಉದ್ದಿಮೆ ಸ್ಥಾಪಿಸಿದ್ದಾರೆ. ಇಂದಿನ ಕಾಲಮಾನದಲ್ಲಿ ಕೈಗಾರಿಕೆ ಸ್ಥಾಪಿಸಲು ಕಷ್ಟಸಾಧ್ಯವೇನಲ್ಲ. ಸಾಕಷ್ಟು ಆರ್ಥಿಕ ಸಹಾಯಧನ ದೊರೆಯಲಿದೆ. ೧,೨,೫,೧೦ ಲಕ್ಷದಿಂದಲೇ ಸಣ್ಣ ಪ್ರಮಾಣದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬಹುದು. ಹೊಸದಾಗಿ ಕೈಗಾರಿಕೆ ಸ್ಥಾಪನೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸ್ಟಾರ್ಟ್ಅಪ್ ಮಾಡಲು ಬ್ಯಾಂಕ್‌ಗಳು ಆರ್ಥಿಕ ಸಹಾಯಧನ ಒದಗಿಸಿಕೊಡಲಿವೆ. ಹೊಸ ಕೈಗಾರಿಕೆ ನೀತಿಯನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಎಐಟಿ ಪ್ರಾಚಾರ್ಯ ಡಾ. ಸಿ.ಟಿ.ಜಯದೇವ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಂ.ಮಹೇಶ್‌ಕುಮಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಚ್.ಎನ್.ಮಹೇಶ್, ಡಾ.ಪ್ರಕಾಶ್‌ರಾವ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net