

ಚಿತ್ರದುರ್ಗ: ಮಹಾತ್ಮಗಾಂಧೀಜಿ ಅವರು ತಮ್ಮ ಜೀವಿತಾವಧಿ ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದರಿಂದಾಗಿದ್ದರು ಇದರಿಂದ ನಮ್ಮಲ್ಲಿನ ಗುಡಿ ಕೈಗಾರಿಕೆಗಳು ಬೆಳೆಯಲು ಕಾರಣವಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಹೇಳಿದರು. ನಗರದ ಜಿಲ್ಲಾ ಬಿಜೆ ಪಿ ಕಚೇರಿಯಲ್ಲಿ ಗುರುವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆಯಲ್ಲಿ ಮಾತನಾಡಿ,ಗುಡಿ ಕೈಗಾರಿಗೆಳ ಅಭಿವೃದ್ಧಿಗೆ ಪೂರಕವಾಗಿ ನಾವು ಕೂಡ ಸ್ವದೇಶಿ ಉತ್ಪನ್ನಗಳ ನಿರಂತರ ಬಳಕೆಗೆ ಮುಂದಾ ಗ ಬೇಕಿದೆ. ಈ ಹಿನ್ನಲೆಯಲ್ಲಿ ಸಾಧ್ಯವಾದಷ್ಟು ವಿದೇಶಿ ಉತ್ಪನ್ನಗಳ ಕಡಿವಾಣ ಹಾಕಿಕೊಳ್ಳ ಬೇಕಿದೆ ಎಂದರು.
ಸಂಪತ್ ಕುಮಾರ್,ಲೋಕೇಶ್,ನಾಗರಾಜ್‌ಬೇದ್ರೇ,ಕೆ.ನಾಗರಾಜ್ ಉಪ್ಪೇರಿಗಿನಹಳ್ಳಿ,ಚಾಲುಕ್ಯನವೀನ್,ನಂದಿನಾಗರಾಜ್,ನಿಂಗೇಶ್, ಬಸವರಾಜು, ಕಿರಣ್,ಸುಮಾ,ಲಕ್ಷ್ಮೀನರಸಿಂಹಸ್ವಾಮಿ,ಮಲ್ಲಿಕಾರ್ಜನ್,ನಾಗರಾಜು,ಸಿದ್ದೇಶ್ ದೇವಪುರದಟ್ಟಿ, ರಮೇಶ್,ಸಂಜಯ್,ಕಾರ್ತಿಕ್,ಬಾಲಾಜಿ,ದೇವೇಂದ್ರಪ್ಪ ಇತರರು ಇದ್ದರು.