ಸ್ವಚ್ಛತೆಯಿದ್ದಲ್ಲಿ ದೇವರ ವಾಸ

10 KAMPLI 01
Published on

ಕಂಪ್ಲಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪುರಸಭೆ ಮಹಿಳಾ ಪೌರಕಾರ್ಮಿಕರನ್ನು ಭಾನುವಾರ ಗೌರವಿಸಲಾಯಿತು.

ಸಂಚಾಲಕಿ ಬ್ರಹ್ಮಕುಮಾರಿ ಸಕಲೇಶ್ವರಿ ಅಕ್ಕ ಮಾತನಾಡಿ, ಪಟ್ಟಣದ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ. ಸ್ವಚ್ಛತೆ ಇದ್ದಲ್ಲಿ ದೇವರು ಇರುತ್ತಾನೆ ಎನ್ನುವಂತೆ ಪ್ರತಿಯೊಬ್ಬರೂ ವೈಯಕ್ತಿಕ, ಸಾಮುದಾಯಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪಟ್ಟಣದ ಸೌಂದರ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರೊಂದಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಪೌರ ಕಾರ್ಮಿಕರಾದ ಜ್ಯೋತಿ, ನಾಗಮ್ಮ ಕುಮಾರಸ್ವಾಮಿ, ಲಕ್ಷ್ಮೀದೇವಿ, ಸುಜಾತಾ, ಆಲುವೇಲಮ್ಮ, ಭಾಗ್ಯಮ್ಮ, ಸಾವಿತ್ರಿ, ಶಾರದಮ್ಮ, ರೇಣುಕಮ್ಮ, ಅನಂತಮ್ಮ, ಗಂಗಮ್ಮ ಅವರನ್ನು ಗೌರವಿಸಲಾಯಿತು.

ಸಹ ಸಂಚಾಲಕಿ ಬ್ರಹ್ಮಕುಮಾರಿ ಗಾಯತ್ರಿ, ಸಾಧಕರಾದ ಉಷಾ, ಜೆ.ಪಿ.ಶಾಸ್ತ್ರಿ, ರವಿ ಗೌಡ, ಸರಸ್ವತಿ ಶಾಸ್ತ್ರಿ, ಸರೋಜಮ್ಮ, ಜಯಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net