ಸ್ವಚ್ಛತೆಯಿಂದ ಯುವಕರಲ್ಲಿ ಸೇವಾ ಭಾವನೆ

oppo_0
oppo_0
Published on

ಗೊರೇಬಾಳ: ಗ್ರಾಮದ ಡಾ.ಶರಣಪ್ಪ ನೇತೃತ್ವದಲ್ಲಿ ಯುವಕರು ಸಂಡೇ ಫಾರ್ ಸೇವಾ ಕಾರ್ಯಕ್ರಮದಡಿ ಕುಡಿಯುವ ನೀರಿನ ಕೆರೆ ಸುತ್ತಲಿನ ಪರಿಸರ ಸ್ವಚ್ಛಗೊಳಿಸಿದರು.

ನ್ಯಾಯ ವಿಜ್ಞಾನ ಪ್ರಯೋಗಾಲಯದ ಅಧಿಕಾರಿ ಡಾ.ವಿಶ್ವನಾಥ ಬಸವರಾಜಪ್ಪ ಹೋತಪೇಟೆ ಮಾತನಾಡಿ, ಸಂಡೇ ಫಾರ್ ಸೇವಾ ಕಾರ್ಯಕ್ರಮ ಯುವಕರರಲ್ಲಿ ಸೇವಾ ಭಾವನೆಗೆ ಕಾರಣವಾಗಲಿದೆ. ನಾನು ಗ್ರಾಮಕ್ಕೆ ಬಂದಾಗಲೆಲ್ಲ ಗ್ರಾಮ ಸ್ವಚ್ಛತೆ ಮಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಗ್ರಾಮದ ಯುವಕರಾದ ಸುಧಾಕರ ರಡ್ಡಿ, ಎಚ್.ದೇವೇಂದ್ರಗೌಡ, ತುಂಬಳ ಚನ್ನಬಸವ, ಯಮನೂರಪ್ಪ ಹೊಸಳ್ಳಿ, ಎಚ್.ವಿಶ್ವನಾಥ, ಎಂ.ಬಸವರಾಜ, ಎಸ್.ಶರಣೇಗೌಡ, ರಂಗನಾಥ ಯಾಪಲಪರ್ವಿ, ರಾಜಪ್ಪ ಭೋವಿ, ಶರಣೇಗೌಡ ಸೂಗೂರು, ವೀರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net