ಸ್ವಚ್ಛತೆಯಿಂದ ಉತ್ತಮ ಆರೋಗ್ಯ ಸಾಧ್ಯ

Dvd Health Checkap
ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ತಪಾಸಣೆಗೆ ಆಗಮಿಸಿದ್ದ ಸಾರ್ವಜನಿಕರು.
Published on

ದೇವದುರ್ಗ: ಮನೆ, ಸುತ್ತಲಿನ ಪರಿಸರ ಸ್ವಚ್ಛವಾಗಿರಿಸಿಕೊಂಡರೆ ರೋಗಗಳಿಂದ ದೂರವಿರಬಹುದು. ಶುದ್ಧ ಕುಡಿವ ನೀರು, ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ವೈದ್ಯಾಧಿಕಾರಿ ಡಾ.ಮಹಾದೇವ ಹೊಸಮನಿ ಹೇಳಿದರು.

ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾನುವಾರ ಮಾತನಾಡಿದರು. ಅಶುದ್ಧ ನೀರು, ಅಪೌಷ್ಟಿಕ ಆಹಾರ, ವಾತಾವರಣದಲ್ಲಿ ಆಗುವ ಬದಲಾವಣೆಯಿಂದ ಸಾಂಕ್ರಾಮಿಕ ರೋಗಗಳು ಬರುತ್ತವೆ.

ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ವೃದ್ಧರು, ಮಹಿಳೆಯರು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ನಾನಾ ಕಾಯಿಲೆ ಬರುವ ಸಾಧ್ಯತೆಯಿದೆ. ಯಾವುದೇ ರೋಗ ಬಂದರೂ ನಿರ್ಲಕ್ಷ್ಯ ಮಾಡದೆ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು.ದುಶ್ಚಟಗಳನ್ನು ತ್ಯಜಿಸಬೇಕು. ವೈದ್ಯರು ನೀಡುವ ಸಲಹೆಗಳುನ್ನು ತಪ್ಪದೆ ಪಾಲಿಸಬೇಕು ಎಂದರು.

ಫ್ಲೋರೋಸಿಸ್ ಜಿಲ್ಲಾ ಸಂಯೋಜಿಕ ಗುರುಪ್ರಸಾದ, ವೈದ್ಯರಾದ ಅರುಣಾ ಕುಲಕರ್ಣಿ, ಸಿದ್ಧರಾಮೇಶ, ಹನುಮಂತ ಹೂಗಾರ, ಕ್ಷಯ ಮೇಲ್ವಿಚಾರಕ ರವಿಶುಕ್ಲ, ಶಿವಶರಣ, ಅಮರೇಶ, ರೇಖಾ, ಶ್ರವಣಕುಮಾರ, ಸುನಂದಾ, ರಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net