

ಚಿತ್ರದುರ್ಗ: ಪ್ಲಾಸ್ಟಿಕ್‌ಮುಕ್ತ,ಸ್ವಚ್ಛ ಹಾಗೂ ಹಸಿರು ಚಿತ್ರದುರ್ಗದ ಗುರಿಗೆ ಸಾರ್ವಜನಿಕರು ಸಹಕರಿಸ ಬೇಕೆಂದು ನಗರಸಭೆ ಪೌರಾಯುಕ್ತೆ ಎಂ. ರೇ ಣುಕಾ ಹೇಳಿದರು.
ಜಿಲ್ಲಾಡಳಿತದಿಂದ ನಗರಸಭೆಯಲ್ಲಿ ಮಂಗಳವಾರ,ಪೌರ ಕಾರ್ಮಿಕರು,ಚಾಲಕರು,ಸ್ಯಾನಿಟರಿ ಸೂಪರ್‌ವೈಸರ್ ಮತ್ತಿತರ ನೌಕರರಿಗೆ, ಹಸಿ ಮತ್ತು ಒಣ ಕಸ ಬೇರ್ಪಡಿಸಿ ಸಂಗ್ರಹಿಸುವ ಕುರಿತಂತೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದ ರು.
ತ್ಯಾಜ್ಯ ಸಂಗ್ರಹಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ತರಬೇತಿಗಳನ್ನು ಕೊಡಲಾಗಿದೆ. ಈ ನಿಟ್ಟಿನಲ್ಲಿ ನೀವು ಸಾರ್ವಜನಿಕರಲ್ಲಿ ಸೂ ಕ್ತ ಅರಿವು ಮೂಡಿಸ ಬೇಕು. ಕಸವನ್ನು ರಸ್ತೆಗೆ ತಂದು ಸುರಿಯದಂತೆ ತಿಳಿ ಹೇಳಬೇಕು. ಕಸ ವಿಲೇವಾರಿಗೆ ನಗರಸಭೆಗೆ ನಾಗರಿಕರ ಸಹ ಕಾರ ಅತ್ಯಗತ್ಯ. ಸಹಕರಿಸದೇ ಇರುವಂಥವರಿಗೆ ದಂಡ ವಿಧಿಸುವ ಅವಕಾಶವೂ ಇದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸ ಬೇಕೆಂದರು.
ಹಾಸನದ ಕ್ಲಿಯರಿನ್ ಸಂಸ್ಥೆ ಸಿಇಒ ಚಂದ್ರಶೇಖರ್ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕ ಸಂಗ್ರಹಿಸಿದಾಗ ವಿಂಗಡಣೆ ಸಮಸ್ಯೆ ಎದು ರಾಗದೆಂದರು. ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಕೊಳೆಯುವುದಿಲ್ಲ ಎಂಬುದರ ಅರಿವು ಎಲ್ಲರಲ್ಲಿ ಇರಬೇಕೆಂದರು.
ಪರಿಸರ ಇಂಜಿನಿಯರ್ ಜಾಫರ್ ಮಾತನಾಡಿ,ನಗರಸಭೆ ವಾಹನಕ್ಕೆ ಯಾರು ಕಸ ಹಾಕುವುದಿಲ್ಲವೋ ಅಂಥವರ ಪಟ್ಟಿ ತಯಾರಿಸಿ,ಅ ವರಿಗೆ ದಂಡ ವಿಧಿಸೋಣವೆಂದರು. ಟ್ಯೂಬ್‌ಲೈಟ್,ಮೊಬೈಲ್ ಚಾರ್ಜರ್ ಇತ್ಯಾದಿಗಳನ್ನು ಪ್ರತ್ಯೇಕವಾಗಿ ವಾಹನಕ್ಕೆ ಹಾಕುವಂತೆ ಜನರಿಗೆ ತಿಳಿಸಬೇಕೆಂದರು. ಆರೋಗ್ಯ ನಿರೀಕ್ಷಕರಾದ ಸರಳಾ,ಭಾರತಿ,ನಿರ್ಮಲಾ,ನಾಗರಾಜ,ಬಸವರಾಜ ಮತ್ತಿತರರು ಇದ್ದರು.
(ಸಿಟಿಡಿ 12 ನಗರಸಭೆ)
ಹಸಿ,ಒಣ ಪ್ರತ್ಯೇಕ ಸಂಗ್ರಹ ಕುರಿತಂತೆ ಚಿತ್ರದುರ್ಗ ನಗರಸಭೆಯಲ್ಲಿ ಮಂಗಳವಾರ ಪೌರ ಕಾರ್ಮಿಕರು,ಚಾಲಕರು,ಸ್ಯಾನಿಟರಿ ಸೂಪ ರ್‌ವೈಸರ್‌ಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ನಗರಸಭೆ ಪೌರಾಯುಕ್ತೆ ರೇಣುಕಾ ಉದ್ಘಾಟಿಸಿದರು. ಹಾಸನದ ಕ್ಲಿಯರಿನ್ ಸಂಸ್ಥೆ ಸಿಇಒ ಚಂದ್ರಶೇಖರ್,ಜಾಫರ್,ಸರಳಾ,ಭಾರತಿ,ನಿರ್ಮಲಾ,ನಾಗರಾಜ,ಬಸವರಾಜ ಇತರರು ಇದ್ದರು.