

ನಿಪ್ಪಾಣಿ: ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ ಪ್ರತಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆ ಮತ್ತು ತಾಲೂಕು ಪಂಚಾಯಿತಿಯಡಿ 17 ಗ್ರಾಪಂಗಳಿಗೆ ಕಸ ಸಂಗ್ರಹಿಸುವ ವಾಹನ ವಿತರಿಸಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ತಾಲೂಕಿನ 17 ಗ್ರಾಪಂಗಳಿಗೆ ಕಸ ಸಂಗ್ರಹಿಸುವ ಸ್ವಚ್ಛ ವಾಹಿನಿ ವಾಹನಗಳನ್ನು ವಿತರಿಸಿ ಮಾತನಾಡಿದರು. ಹುಕ್ಕೇರಿ ತಾಲೂಕಿನ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಶ್ರೀ ಪೂಜೆ ಸಲ್ಲಿಸಿದರು. ಹುನ್ನರಗಿ, ಕುನ್ನೂರ, ಮಮದಾಪುರ ಕೆ.ಎಲ್., ಮಾಂಗೂರ, ಸಿದ್ನಾಳ, ಆಡಿ, ಅಪ್ಪಾಚಿವಾಡಿ, ಬಾರವಾಡ, ಬೆನ್ನಾಡಿ, ಡೋಣೆವಾಡಿ, ಕುರ್ಲಿ, ಕೋಡಣಿ, ಶೇಂಡೂರ, ಶಿರಗುಪ್ಪಿ, ಯಮಗರ್ಣಿ, ಯರನಾಳ, ಶಿರದವಾಡ ಗ್ರಾಪಂಗಳಿಗೆ ವಾಹನ ವಿತರಿಸಲಾಯಿತು. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ, ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ತಹಸೀಲ್ದಾರ್ ಡಾ.ಮೋಹನ ಭಸ್ಮೆ, ತಾಪಂ ಇಒ ಮಲ್ಲಿಕಾರ್ಜುನ ಉಳಾಗಡ್ಡಿ, ಜಯವಂತ ಭಾಟಲೆ, ನೀತಾ ಬಾಗಡೆ, ರಾಜು ಗುಂಡೇಶಾ, ಅಭಯ ಮಾನವಿ ಇದ್ದರು.