

ಗುಂಡ್ಲುಪೇಟೆ: ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಸಂಬಂಧ ಪುರಸಭೆಯು ಸ್ವಚ್ ಭಾರತ್ ಮಿಷನ್ 2.0 ಯೋಜನೆಯಡಿ ನೇಮಕಗೊಂಡಿರುವ ಸ್ವಚ್ಛತೆಗಾಗಿ ಸ್ತ್ರೀಶಕ್ತಿ ಸಂಚಾಲಕರು ನಾನಾ ಬಡಾವಣೆಗಳಲ್ಲಿ ಸಂಚರಿಸಿ ಪರಿಶೀಲಿಸಿದರು.
ಪುರಸಭೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆಗಳಲ್ಲಿಯೇ ಹಸಿ, ಒಣ ಕಸ ವಿಂಗಡಿಸಿ ನೀಡುವಂತೆ ಅರಿವು ಮೂಡಿಸಿದರು. ಪ್ರತಿ ಹೋಟೆಲ್ ಹಾಗೂ ಅಂಗಡಿಗೆ ಭೇಟಿ ನೀಡಿ ಏಕ ಬಳಕೆ ಪ್ಲಾಸ್ಟಿಕ್ ದಾಸ್ತಾನು, ಮಾರಾಟ ಮಾಡಿರುವ ಬಗ್ಗೆ ಪರಿಶೀಲಿಸಿದರು.
ಬೀದಿ ಬದಿ ವ್ಯಾಪಾರಿಗಳು ಆಹಾರ ಪದಾರ್ಥಗಳಲ್ಲಿ ಶುಚಿತ್ವ ಕಾಪಾಡಿಕೊಂಡಿರುವುದು, ಪ್ಲಾಸ್ಟಿಕ್ ಚೀಲವನ್ನು ಬಳಸದಂತೆ ತಿಳಿಸುವುದು, ವಾಣಿಜ್ಯ ಅಂಗಡಿಗಳ ಉದ್ಯಮ ಪರವಾನಗಿ ಪಡೆಯದಿರುವ ಮತ್ತು ನವೀಕರಿಸದಿರುವ ಕುರಿತು ಪರಿಶೀಲನೆ ನಡೆಸಿದರು.
ಪುರಸಭೆ ಅಧ್ಯಕ್ಷ ಪಿ.ಶಶಿಧರ್(ದೀಪು), ಉಪಾಧ್ಯಕ್ಷ ಕಪ್ಪಣ್ಣ, ಮುಖ್ಯಾಧಿಕಾರಿ ಸರವಣ ಇತರರು ಇದ್ದರು.