

ಬಾಳೆಹೊನ್ನೂರು: ಪರಿಸರ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಜೆಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಹೇಳಿದರು.
ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಬುಧವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌರ ಕಾರ್ಮಿಕರು ಇಲ್ಲದಿದ್ದರೆ ಊರಿನ ಸ್ವಚ್ಛತೆ ಹಾಳಾಗುವುದರೊಂದಿಗೆ ಅಲ್ಲಿನ ಆರೋಗ್ಯ ವ್ಯವಸ್ಥೆಯೂ ಹದಗೆಡಲಿದೆ. ಸಂಘ ಸಂಸ್ಥೆಗಳು ಪೌರ ಕಾರ್ಮಿಕರನ್ನು ಗುರುತಿಸುವ ಕೆಲಸ ಮಾಡಬೇಕಿದೆ ಎಂದರು. ಬಿ.ಕಣಬೂರು ಗ್ರಾಪಂ ಪೌರ ಕಾರ್ಮಿಕರಾದ ಅಣ್ಣಪ್ಪ ದಂಪತಿಯನ್ನು ಗೌರವಿಸಲಾಯಿತು. ಜೇಸಿ ಪೂರ್ವಾಧ್ಯಕ್ಷ ಸುರೇಂದ್ರ, ಸುಧಾಕರ್, ವಿ.ಅಶೋಕ್, ಕೆ.ಪ್ರಶಾಂತ್‌ಕುಮಾರ್, ಸಿ.ವಿ.ಸುನೀಲ್, ಎಂ.ಸಿ.ಅಭಿಷೇಕ್ ಇತರರಿದ್ದರು.