ಸ್ವಚ್ಛತೆ ಇಲ್ಲದ ಬಸ್ ತಂಗುದಾಣ

oppo_0
Unclean bus stop
Published on

ಬೈಲುಕುಪ್ಪೆ: ಆವರ್ತಿ ರಸ್ತೆಯಲ್ಲಿರುವ ಬಸ್ ತಂಗುದಾಣ ಸ್ವಚ್ಛತೆ ಇಲ್ಲದ ಪರಿಣಾಮ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ದುರ್ನಾತ ಸಹಿಸುವಂತಾಗಿದೆ.

ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಆವರ್ತಿ ರಸ್ತೆಯಲ್ಲಿರುವ ಬಸ್ ತಂಗುದಾಣ ನಿಲ್ದಾಣ ಶಿಥಿಲಗೊಂಡು ಬಸ್ ಪ್ರಯಾಣಿಕರು ನಿಲ್ದಾಣದ ಒಳಗೆ ಹೋಗಿ ನಿಲ್ಲಲು ಸಾಧ್ಯವಿಲ್ಲದಂತಿದೆ. ಸಾರ್ವಜನಿಕರ ದೂರಿನ ಮೇರೆಗೆ ಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದಲೇ ಎರಡು ವರ್ಷದ ಹಿಂದೆ ದುರಸ್ತಿ ಕಾರ್ಯ ನಡೆಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ವತಿಯಿಂದ ಕೆಲ ತಿಂಗಳಿಂದ ಸ್ವಚ್ಛತೆ ಗಮನ ನೀಡದ ಪರಿಣಾಮ ಪ್ರಯಾಣಿಕರು ನಿಲ್ದಾಣ ಬಳಿ ನಿಲ್ಲಲು ಕಷ್ಟವಾಗುತ್ತಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆ ಕಾರ್ಯಕ್ಕೆ ಗಮನ ಹರಿಸಬೇಕಾಗಿದೆ. ಮಳೆ, ಬಿಸಿಲು ಸಂದರ್ಭದಲ್ಲಿ ಸರ್ಕಲ್‌ನಲ್ಲಿ ಇರುವ ಬಸ್ ನಿಲ್ದಾಣದ ಬಳಿ ಬಸ್ಸಿಗೆ ಕಾಯುವ ಸಾರ್ವಜನಿಕರು, ಶಾಲಾ ಮಕ್ಕಳು, ಪ್ರಯಾಣಿಕರು ಸ್ವಚ್ಛತೆ ಇಲ್ಲದ ಕಾರಣ ಒಳ ಹೋಗಿ ನಿಲ್ಲಲು ಅಸಾಧ್ಯವಾಗಿದೆ. ಒಳ ಆವರಣದಲ್ಲಿ ಬಿದ್ದಿರುವ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಅಶುಚಿತ್ವದಿಂದ ಸಾಂಕ್ರಾಮಿಕ ರೋಗ ಹಾಡುವ ಭೀತಿ ಜನರಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ವಚ್ಛತೆ ಮುಂದಾಗಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net