ಸ್ವಚ್ಛತೆ-ಅಂತರ ಕಾಪಾಡಿಕೊಳ್ಳಿ

02 SIRAGUPPA 02
Published on

ಸಿರಗುಪ್ಪ: ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಕ್ರಿದ್ ಆಚರಿಸಬೇಕು ಎಂದು ಡಿವೈಎಸ್ಪಿ ವೆಂಕಟೇಶ ಹೇಳಿದರು.

ಬಕ್ರೀದ್ ಪ್ರಯುಕ್ತ ಪಟ್ಟಣದ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಭಾನುವಾರ ಮಾತನಾಡಿದರು. ಎಲ್ಲರೂ ಒಗ್ಗಟ್ಟಾಗಿ, ಶಾಂತಿಯಿಂದ ಹಬ್ಬ ಆಚರಿಸಬೇಕು. ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಾರ್ಥನೆಗೆ ದ್ವಿಚಕ್ರ ವಾಹನಗಳ ಬದಲಿಗೆ ನಡೆದುಕೊಂಡು ಬರುವುದು ಉತ್ತಮ. ವಾಹನಗಳನ್ನು ತಂದವರು ಸಾಲಾಗಿ ನಿಲ್ಲಿಸಬೇಕು. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಎಚ್ಚರಿಕೆ ವಹಿಸಬೇಕು. ಕೋವಿಡ್ ವಾತಾವರಣ ಇರುವುದರಿಂದ ಸ್ವಚ್ಛತೆಯೊಂದಿಗೆ ಅಂತರ ಕಾಪಾಡಿಕೊಳ್ಳಬೇಕೆಂದರು.

ಸಾಮಾಜಿಕ ಜಾಲತಾಣದಲ್ಲಿ ಹಬ್ಬದ ಕುರಿತು ಅವಹೇಳನಕಾರಿ ಮಾಹಿತಿ ಹಾಕುವುದು ಅಪರಾಧವಾಗಿದೆ. ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಆದರೆ, ಇನ್ನೊಬ್ಬರಿಗೆ ತೊಂದರೆ ಆಗದಂತೆ ಕ್ರಮವಹಿಸಿ. ಮಕ್ಕಳಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡದಿರಿ. ನೀಡಿದಲ್ಲಿ ಪಾಲಕರಿಗೆ ದಂಡ ವಿಧಿಸಲಾಗುವುದು ಎಂದು ಡಿವೈಎಸ್ಪಿ ವೆಂಕಟೇಶ ತಿಳಿಸಿದರು. ಸಿಪಿಐಗಳಾದ ಹನುಮಂತಪ್ಪ, ಚಂದನಗೋಪಾಲ, ಪಿಎಸ್‌ಐಗಳಾದ ಸದ್ದಾಂ ಹುಸೇನಿ, ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net