ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಸ್ಪಂದನೆ

Kote
Published on

ಚಿತ್ರದುರ್ಗ: ಮಹಾತ್ಮಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸ್ವಚ್ಛತಾ ಕರೆಗೆ ಜಿಲ್ಲೆಯ ಹಲವೆಡೆಗಳಲ್ಲೂ ಉತ್ತಮ ಸ್ಪಂದನೆ ದೊರೆಯಿತು.

ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ಜಿಲ್ಲಾಡಳಿತ ಒಳಗೊಂಡು ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ಎನ್‌ಜಿಒ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಭಾನುವಾರ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಕಲ್ಲಿನಕೋಟೆ ಸೇರಿ ಐತಿಹಾಸಿಕ ಸ್ಥಳಗಳು, ಪುಷ್ಕರಣಿ, ಹೊಂಡ, ಆಸ್ಪತ್ರೆ, ರೋಗಿಗಳಿಗೆ ಬಳಸುವ ವೈದ್ಯಕೀಯ ಪರಿಕರಗಳು, ಸರ್ಕಾರಿ ಕಚೇರಿಗಳು, ನಗರ-ಪಟ್ಟಣ-ಗ್ರಾಮೀಣ ಭಾಗಗಳ ರಸ್ತೆ, ಚರಂಡಿ ಸೇರಿ ಹಲವೆಡೆಗಳಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿತು.

ಜಿಲ್ಲಾಡಳಿತ, ನಗರಸಭೆಯಿಂದ ಐತಿಹಾಸಿಕ ಕೋಟೆ ಆವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ಕೆ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಚಾಲನೆ ನೀಡಿ, ಪ್ರತಿಜ್ಞಾ ವಿಧಿ ಬೋಧಿಸಿದರು. ನಗರಸಭೆ ಪೌರಾಯುಕ್ತೆ ರೇಣುಕಾ, ಪ್ರಾಂಶುಪಾಲ ನಾಗರಾಜ, ವಿವಿಧ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net