ಸ್ವಚ್ಛತಾ ಕಾರ್ಯ ಆಂದೋಲನವಾಗಲಿ

31.08.2020 SDLP 01
Published on

ಶಿಡ್ಲಘಟ್ಟ : ನಮ್ಮ ಮನೆ, ನಮ್ಮ ಬೀದಿ, ನಮ್ಮ ಗ್ರಾಮ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಯಾರೋ ಬಂದು ಸ್ವಚ್ಛಗೊಳಿಸುತ್ತಾರೆ ಎಂಬ ಧೋರಣೆ ಬಿಟ್ಟು, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಾಪಂ ಇಒ ಬಿ.ಶಿವಕುಮಾರ್ ತಿಳಿಸಿದರು.

ತಾಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಗಮಕೋಟೆ ಕ್ರಾಸ್‌ನಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ಕಸ ವಿಲೇವಾರಿ ಕುರಿತು ಸೋಮವಾರ ಅರಿವು ಮೂಡಿಸಿ ಮಾತನಾಡಿದರು.ಅಂಗಡಿಗಳ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಒಂದೊಂದು ಗ್ರಾಮದಲ್ಲೂ ಈ ರೀತಿಯ ಸ್ವಚ್ಛತಾ ಕಾರ್ಯ ಆಂದೋಲನದಂತೆ ಪ್ರಾರಂಭವಾಗಬೇಕು ಎಂದರು.

ತಾಪಂ ಇಒ, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳೊಂದಿಗೆ ಸ್ವಚ್ಛತೆ ಕಾರ್ಯ ನಡೆಸಿದರು. ಗ್ರಾಮಸ್ಥರೂ ಕೈಜೋಡಿಸಿದರು. ಗ್ರಾಪಂನಿಂದ ಇಒ ಅವರನ್ನು ಸನ್ಮಾನಿಸಲಾಯಿತು.ಪಿಡಿಒ ಕೆ.ಎಸ್.ಮಧು, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಾ ನರಸಿಂಹಮೂರ್ತಿ, ಸದಸ್ಯರಾದ ಮಂಜುನಾಥಗೌಡ, ಸುರೇಶ್, ರಾಜಶೇಖರ್, ಎಸ್.ವೈ.ನಾರಾಯಣಸ್ವಾಮಿ, ನರಸಿಂಹಮೂರ್ತಿ, ಮೀನಾಕ್ಷಿ ಬಸಪ್ಪ, ಸುಶೀಲಮ್ಮನಾರಾಯಣಸ್ವಾಮಿ, ರಜಿನಿ, ಯಶೋದಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net