ಸ್ವಚ್ಛತಾ ಓಟಕ್ಕೆ ಶಾಸಕರಿಂದ ಚಾಲನೆ

19raju1
ಚಾಮರಾಜನಗರ ತಾಲೂಕಿನ ಮಲ್ಲಯ್ಯನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ವಿಶ್ವ ಶೌಚಗೃಹ ದಿನಾಚರಣೆ ಅಂಗವಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಸ್ವಚ್ಛತಾ ಓಟಕ್ಕೆ ಚಾಲನೆ ನೀಡಿದರು. ಎಂ.ಸಿ.ಮಹದೇವಮ್ಮ, ಕುಮಾರಸ್ವಾಮಿ, ಪೂರ್ಣಿಮಾ, ಆರ್.ಉಮೇಶ್ ಮತ್ತು ಇತರರು ಇದ್ದರು.
Published on

ಚಾಮರಾಜನಗರ: ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಶ್ವ ಶೌಚಗೃಹ ದಿನಾಚರಣೆ ಅಂಗವಾಗಿ ಶನಿವಾರ ಸ್ವಚ್ಛತಾ ಓಟ ಏರ್ಪಡಿಸಲಾಗಿತ್ತು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಯಲು ಬಹಿರ್ದೆಸೆ ತಪ್ಪಿಸಲು ಶೌಚಗೃಹ ನಿರ್ಮಾಣ ಮಾಡುವ ಸಂಬಂಧ ಸಹಾಯಧನ ನೀಡಲಾಗುತ್ತದೆ. ಜನರು ಸಹಾಯಧನ ಪಡೆದುಕೊಂಡು ಶೌಚಗೃಹ ನಿರ್ಮಿಸಿಕೊಳ್ಳಬೇಕು. ನಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸಲಹೆ ನೀಡಿದರು.

ಶಿವಪುರ ಗ್ರಾಪಂ ಅಧ್ಯಕ್ಷೆ ಎಂ.ಸಿ.ಮಹದೇವಮ್ಮ, ಉಪಾಧ್ಯಕ್ಷ ಕುವಾರಸ್ವಾಮಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಪೂರ್ಣಿವಾ, ಕಾರ್ಮಿಕ ಕನಿಷ್ಠ ವೇತನ ಸಲಹ ಮಂಡಳಿ ವಾಜಿ ಅಧ್ಯಕ್ಷ ಆರ್.ಉಮೇಶ್, ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಶಾಲಾವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net