ಸ್ವಚ್ಛಗೊಂಡ ಹಗರೆ-ಕಾಮೇನಹಳ್ಳಿ ರಸ್ತೆ ಸೇತುವೆ

1002016475
Published on

ಹಗರೆ: ಹಗರೆ-ಕಾಮೇನಹಳ್ಳಿ ರಸ್ತೆಯಲ್ಲಿ ಎತ್ತಿನಹೊಳೆ ಕಾಮಗಾರಿಯಿಂದ ನಿರ್ಮಿತವಾದ ಸೇತುವೆ ಮೇಲೆ ನೀರು ತುಂಬಿ, ಪಾಚಿ ಕಟ್ಟಿ ವಾಹನ ಚಾಲನೆಗೆ ತೊಂದರೆಯಾಗುತ್ತಿದ್ದ ಬಗ್ಗೆ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿಯ ಅ.14ರ ಸಂಚಿಕೆಯಲ್ಲಿ ‘ಅವೈಜ್ಞಾನಿಕ ಸೇತುವೆಯಿಂದ ಸಂಚಾರಕ್ಕೆ ಅಡ್ಡಿ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾದ ಹಿನ್ನಲೆಯಲ್ಲಿ ಎಚ್ಚೆತ್ತ ಎತ್ತಿನಹೊಳೆ ಆಲೂರು ಕಾರ್ಯಪಾಲ ಇಂಜಿನಿಯರ್ ಶಶಿಕುಮಾರ್ ಸ್ಥಳಕ್ಕಾಗಮಿಸಿ, ಪರೀಶಿಲಿಸಿ ಕಾರ್ಮಿಕರಿಂದ ಪಾಚಿ ಮಣ್ಣು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸೇತುವೆಯನ್ನು ಪರಿಪೂರ್ಣವಾಗಿ ಪರಿಶೀಲಿಸಿ ಮಾತನಾಡಿದ ಇಂಜಿನಿಯರ್ ಶಶಿಕುಮಾರ್, ಸಮಸ್ಯೆಯನ್ನು ಗಮನಿಸಿ ಪರಿಶೀಲಿಸಲು ಬಂದಿದ್ದೇನೆ. ಇಲ್ಲಿನ ಹುಲ್ಲು, ಮಣ್ಣು, ಪಾಚಿಗಳನ್ನು ನಮ್ಮ ಕಾರ್ಮಿಕರು ಸ್ವಚ್ಛಗೊಳಿಸಿದ್ದಾರೆ. /ಪ್ರಯಾಣಿಕರು ಭಯವಿಲ್ಲದೆ ಓಡಾಡಬಹುದು ಎಂದು ತಿಳಿಸಿದರು . ಸೇತುವೆಯ ಮೇಲ್ಭಾಗದ ಒಂದು ಬದಿಯಲ್ಲಿ ಜಲ ಜೀವನ್ ಮಿಷನ್‌ನ ಗುತ್ತಿಗೆದಾರರು ಪೈಪ್ ಅನ್ನು ಅಳವಡಿಸಿದ್ದು ಅದು ಅವೈಜ್ಞಾನಿಕವಾಗಿದೆ. ನೀರು ಕೆಳಗೆ ಹೋಗಲು ಜಾಗವಿಲ್ಲದಂತೆ ರಂಧ್ರಗಳನ್ನು ಮುಚ್ಚಿದ್ದಾರೆ.

ಇದರಿಂದಾಗಿ ನೀರು ಕೆಳಗೋಗದೆ ಮೇಲೆಯೇ ನಿಂತು ಸಮಸ್ಯೆ ಹೆಚ್ಚಾಗಿದೆ. ಕೂಡಲೇ ಲೋಕೊಪಯೋಗಿ ಇಲಾಖಾ ಅಧಿಕಾರಿಗಳೊಂದಿಗೆ ಮಾತನಾಡಿ, ಪತ್ರ ಬರೆದು ಸಮಸ್ಯೆ ವಿವರಿಸಿ ಪೈಪ್ ಬೇರ ಕಡೆ ಅಳವಡಿಸುವಂತೆ ಮನವಿ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net