

ಹುಮನಾಬಾದ್: ಸ್ವಚ್ಛತೆಯಿಂದ ಕೂಡಿದ ಸ್ಥಳ ಸುಂದರ, ಆರೋಗ್ಯದಿಂದ ಇರುತ್ತದೆ. ನಮ್ಮ ಮನೆ, ಬೀದಿ, ಗ್ರಾಮ, ನಗರ ಸ್ವಚ್ಛವಾಗಿ ಇಟ್ಟುಕೊಂಡರೆ ಅಭಿಯಾನಕ್ಕೆ ಪ್ರೋತ್ಸಾಹಿಸಿದಂತೆ ಆಗುತ್ತದೆ. ನಿತ್ಯ ಸ್ವಚ್ಛತೆಗೆ ಸಮಯ ಮೀಸಲು ಇಡಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಸ್ವಾತಂತ್ರ ಹೋರಾಟಗಾರ ಶಿವಾಚಂದ್ರ ನೇಳಗೆ ವೃತ್ತದಲ್ಲಿ ಭಾರತೀಯ ಜನತಾ ಪಕ್ಷ ನಗರ ಘಟಕದಿಂದ ಭಾನುವಾರ ಹಮ್ಮಿಕೊಂಡ ಸ್ವಚ್ಛತೆಗಾಗಿ ಶ್ರಮದಾನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಅಭಿಯಾನದಲ್ಲಿ ಭಾಗವಹಿಸಿ ಸ್ವಚ್ಛ ಸುಂದರ ಪರಿಸರದಿಂದ ಕೂಡಿದ ಭಾರತವನ್ನು ನಿರ್ಮಿಸುವ ಕನಸನ್ನು ನನಸು ಮಾಡೋಣ ಎಂದರು.
ಮಾಜಿ ಶಾಸಕ ಸುಭಾಷ ಕಲ್ಲೂರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ಬಸವರಾಜ ಆರ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ, ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ, ನಗರ ಅಧ್ಯಕ್ಷ ಗಿರೀಶ ಪಾಟೀಲ್, ಮಂಡಲ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಭಂಡಾರಿ, ಪುರಸಭೆ ಸದಸ್ಯ ವಿಜಯಕುಮಾರ ದುರ್ಗೆ, ತಾಪಂ ಮಾಜಿ ಸದಸ್ಯ ನಾಗೇಶ ಕಲ್ಲೂರ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಗಜೇಂದ್ರ ಕನಕಟಕರ್, ಎಸ್‌ಸಿ ಮೋರ್ಚಾ ಮಂಡಲ ಅಧ್ಯಕ್ಷ ರವಿ ಹೊಸ್ಸಳ್ಳಿ, ಮುಖಂಡರಾದ ಗಿರೀಶ ತುಂಬಾ, ಮಲ್ಲಿಕಾರ್ಜುನ ಸೀಗಿ, ಶ್ರೀನಾಥ ದೇವಣಿ, ಸಂತೋಷ ನಾವದಗಿ, ಲಖನ ಕೋಳಿವಾಡ ಇತರರಿದ್ದರು.