

ಸಂಡೂರು: ಪಟ್ಟಣದ 17ನೇ ವಾರ್ಡ್‌ನಲ್ಲಿ ಸಾರ್ವಜನಿಕರಿಗೆ ಮೀಸಲಾದ ಜಾಗವನ್ನು ಜನರು ತಿಪ್ಪೆಯಾಗಿ ಮಾಡಿಕೊಂಡಿದ್ದಾರೆ. ಪ್ರತಿ ದಿನ ಪುರಸಭೆಯ ಕಸ ಸಂಗ್ರಹ ವಾಹನ ಬಂದರೂ ಅದರಲ್ಲಿ ಕಸ ಹಾಕುತ್ತಿಲ್ಲ. ಇದರಿಂದಾಗಿ ಸೊಳ್ಳೆ, ಹಂದಿ, ನಾಯಿ, ಬಿಡಾಡಿ ದನಗಳ ಹಾವಳಿ ಹೆಚ್ಚಾಗಿವೆ ಎಂದು ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್ ಹೇಳಿದರು.
ಈ ಕುರಿತ ದೂರುಗಳು ಬಂದ ಹಿನ್ನೆಲೆಯಲ್ಲಿ ಸದರಿ ಜಾಗದಲ್ಲಿ ಮಣ್ಣು ಹಾಕಿಸಿ, ನಿರುಪಯುಕ್ತ ವಸ್ತುಗಳಿಂದ ಅಲಂಕಾರ ಮಾಡಿ ಎಲ್‌ಇಡಿ ಬಲ್ಬ್ ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಜಾಗದಲ್ಲಿ ಯಾರಾದರೂ ಕಸ ಹಾಕಿದರೆ ಫೋಟೊ ಕಳುಹಿಸಿ ಸ್ವಚ್ಛ ಸಂಡೂರಿಗೆ ಆದ್ಯತೆ ನೀಡಬೇಕು ಎಂದು ಕೋರಿದರು.