

ವಾಡಿ: ಸ್ವಚ್ಛ ಪರಿಸರದಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ದಂಡಗುAಡದ ಸಾವಿರ ದೇವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಸಂಗಮನಾಥ ಸ್ವಾಮೀಜಿ ಹೇಳಿದರು.
ದಂಡಗುAಡದಲ್ಲಿ ಲರ್ನಿಂಗ್ ಲಿಂಕ್ ಫೌಂಡೇಷನ್ ಹಾಗೂ ಗ್ರಾಮ ಪಂಚಾಯಿತಿಯಿAದ ಶನಿವಾರ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಲರ್ನಿಂಗ್ ಲಿಂಕ್ ಸಂಸ್ಥೆ ಶೈಕ್ಷಣಿಕ ಚಟುವಟಿಕೆ ಜತೆಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ಸುಂದರ ಹಳ್ಳಿ, ರಾಜ್ಯ ಹಾಗೂ ದೇಶ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಲರ್ನಿಂಗ್ ಲಿಂಕ್ ಫೌಂಡೇಷ್‌ನ ವ್ಯವಸ್ಥಾಪಕ ಸಂತೋಷ ಪಸರ ಮಾತನಾಡಿ, ದೇಶ ಕಟ್ಟುವ ನಾಯಕರು, ಉತ್ತಮ ನಾಗರೀಕರು, ವಿಜ್ಞಾನಿಗಳನ್ನು ತಯಾರು ಮಾಡುವ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ತರುವ ಉz್ದೆÃಶದಿಂದ ನಮ್ಮ ಸಂಸ್ಥೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಕೆಲಸಗಳನ್ನು ಮಾಡಿಕೊಂಡು ಹೋಗಲಾಗುತ್ತಿದೆ. ಸಾರ್ವಜನಿಕರು ಮತ್ತು ಸರ್ಕಾರದಿಂದಲೂ ಸಹಕಾರ ಸಿಗುತ್ತಿದೆ ಎಂದರು.
ಗ್ರಾಪA ಅಧ್ಯಕ್ಷ ಆಂಜನೇಯ ಗುತ್ತೇದಾರ್, ಪ್ರಮುಖರಾದ ವೀರಪ್ಪ ಕುಂಬಾರ, ಸಂಜೀವಕುಮಾರ, ನಾಗರತ್ನ, ಸುಷ್ಮಾ, ಡಾ.ಸುಧೀರ್, ದೇವಿಂದ್ರ, ಯಂಕಪ್ಪ, ಮಹಾದೇವಪ್ಪ ಗೌಡ ಡೋಣಗಾಂವ್, ಕವಿತಾ, ಲಕ್ಷಿö್ಮÃ, ಸಿದ್ದಣ್ಣ ಮುದೋಳ, ಬಂಗಾರಪ್ಪ ಇತರರಿದ್ದರು.