ಬಳ್ಳಾರಿ : ನಗರದ ವಿವಿಧ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡುವುದು ಅಗತ್ಯವಾಗಿದ್ದು, ಸ್ವಚ್ಚ ನಗರ ನಿರ್ಮಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಅಂಕಿ ಸಂಖ್ಯೆಗಳ ಇಲಾಖೆ, ಸಾಯಿ ಸಂಸ್ಥೆ ಹಾಗೂ ಲಿಯಾ ಯೂತ್ ಅಸೋಸಿಯೇಷನ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತೆಯ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಿಕೆ ವ್ಯಾಪ್ತಿಯ 39 ವಾರ್ಡಗಳಲ್ಲಿ ದಿನನಿತ್ಯವೂ ಕಸ ವಿಲೇವಾರಿ ನಡೆಯುತ್ತಲಿದ್ದು, ಸಾರ್ವಜನಿಕರು ಕಸ ವಿಲೇವಾರಿ ವಾಹನಗಳಿಗೆ ತ್ಯಾಜ್ಯ ನೀಡಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ಅಂಕಿ ಸಂಖ್ಯೆಗಳ ಇಲಾಖೆಯ ಅಧಿಕಾರಿ ಮನೀಶ್ ಮಾತನಾಡಿದರು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಟೋಪಿ ಮತ್ತು ಪುಸ್ತಕ-ಪೆನ್ ವಿತರಿಸಲಾಯಿತು. ಜಾಗೃತಿ ಜಾಥಾವು ನಗರದ ಮುನಿಸಿಪಾಲ್ ಕಾಲೇಜು ಆವರಣದಿಂದ ಆರಂಭಗೊಂಡು ಶ್ರೀರಾಂಪುರ ಕಾಲನಿಯವರೆಗೆ ನಡೆಯಿತು. ಸ್ವಚ್ಛತಾ ಕುರಿತು ಜಾಗೃತಿ ಗೀತೆ ಹಾಡಲಾಯಿತು.