ಸ್ವಉದ್ಯೋಗದಿಂದ ಅಭಿವೃದ್ಧಿ

nrp krusi
ಎನ್.ಆರ್.ಪುರ ತಾಲೂಕು ಗುಳದಮನೆಯಲ್ಲಿ ಮಾಹಿತಿ ಕಾರ್ಯಕ್ರಮವನ್ನು ನೆದರ್‌ಲ್ಯಾಂಡ್ ದೇಶದ ಸೋಲಿಡೇರ್ ಮೆಟ್ ಇಂಡಿಯಾ ನಿರ್ದೇಶಕಿ ಆಂಜಬೇಕರ್ ಉದ್ಘಾಟಿಸಿದರು. ರೆ.ಾ.ಜೋಬೀಶ್, ರೋಹಿತ್, ಪ್ರಭಾಕರ್ ಇತರರಿದ್ದರು.
Published on

ಎನ್.ಆರ್.ಪುರ: ಮಹಿಳೆಯರು ತರಬೇತಿ ಪಡೆದು ಸ್ವಉದ್ಯೋಗ ಪ್ರಾರಂಭಿಸಿದರೆ ಹೆಚ್ಚು ಯಶಸ್ಸು ಕಾಣಬಹುದು ಎಂದು ನೆದರ್‌ಲ್ಯಾಂಡ್ ದೇಶದ ಸೋಲಿಡೇರ್ ಮೆಟ್ ಇಂಡಿಯಾ ನಿರ್ದೇಶಕಿ ಆಂಜಬೇಕರ್ ಹೇಳಿದರು.

ಶನಿವಾರ ಗುಳದಮನೆ ಗಣಪತಿ ಪೆಂಡಾಲ್‌ನಲ್ಲಿ ಸೋಷಿಯಲ್ ವೆಲ್ಫೇರ್ ಸೊಸೈಟಿ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ರೈತ ಕುಟುಂಬದಿಂದ ಬಂದಿದ್ದೇನೆ. ಈ ಭಾಗದಲ್ಲಿ ರೈತರು ಮಾಡುತ್ತಿರುವ ಕೃಷಿಯನ್ನು ಅಧ್ಯಯನ ಮಾಡುತ್ತೇನೆ. ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಕೃಷಿ ಜತೆಗೆ ಕೃಷಿಗೆ ಪೂರಕವಾಗಿ ಸ್ವಉದ್ಯೋಗ ಮಾಡಬಹುದು. ಮಹಿಳೆಯರು ಟೈಲರಿಂಗ್, ಹಸು ಸಾಕಣೆ ಸೇರಿದಂತೆ ಸ್ವಉದ್ಯೋಗ ಮಾಡಬಹುದು ಎಂದರು.

ಸೋಷಿಯಲ್ ವೆಲ್ಫೇರ್ ಸೊಸೈಟಿ ನಿರ್ದೇಶಕ ರೆ.ಾ.ಜೋಬೀಶ್ ಮಾತನಾಡಿ, ಸಂಸ್ಥೆ 35 ವರ್ಷದಿಂದ ಗ್ರಾಮೀಣ ಪ್ರದೇಶದ ಮಹಿಳೆಯರಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಿದೆ. ಮಹಿಳೆಯರಿಗೆ ಸ್ವಸಹಾಯ ಸಂಘ ರಚನೆ ಮಾಡಿ ಅವರ ಸ್ವ ಉದ್ಯೋಗಕ್ಕಾಗಿ ಬ್ಯಾಂಕುಗಳಿಂದ ಸಾಲ ಕೊಡಿಸಿದೆ. ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಲು ಸಂಸ್ಥೆ ಮೂಲಕ ಅನೇಕ ತರಬೇತಿ ನೀಡಿದೆ ಎಂದರು.

ಹಿರಿಯ ತೋಟಗಾರಿಕೆ ನಿರ್ದೇಶಕ ರೋಹಿತ್ ಮಾಹಿತಿ ನೀಡಿ, ರೈತರು ಒಂದೇ ಬೆಳೆ ನಂಬಿಕೊಂಡಿರಬಾರದು. ಮಿಶ್ರ ಬೆಳೆ ಬೆಳೆದರೆ ಹೆಚ್ಚು ಲಾಭ ಪಡೆಯಬಹುದು. ರೈತರು ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೈತರು ಜಮೀನಿನ ಮಣ್ಣನ್ನು ತಂದು ತೋಟಗಾರಿಕೆ ಇಲಾಖೆಗೆ ನೀಡಿದರೆ ಮಣ್ಣು ಪರೀಕ್ಷೆ ಮಾಡಿಸಿಕೊಡುತ್ತೇವೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಯ ಮಂಜುಳಾ ಆಯುಷ್ಮಾನ್ ಕಾರ್ಡ್‌ನ ಮಾಹಿತಿ ನೀಡಿದರು. ತಾಪಂ ಎನ್‌ಆರ್‌ಎಲ್‌ಎಲ್‌ಎಂ ಯೋಜನೆ ತಾಲೂಕು ಕಾರ್ಯಕ್ರಮ ಸಂಯೋಜಕ ಸುಬ್ರಹ್ಮಣ್ಯ ಅವರು ಸಂಜೀವಿನಿ ಒಕ್ಕೂಟದ ಮಾಹಿತಿ ನೀಡಿದರು. ಮಹಿಳಾ ಸಾಂತ್ವನ ಕೇಂದ್ರದ ಆರ್.ಶಶಿಕಲಾ ಮಹಿಳೆಯರ ಹಕ್ಕಿನ ಮಾಹಿತಿ ನೀಡಿದರು. ಸೋಷಿಯಲ್ ವೆಲ್ಫೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿದರು.

ವಿವಿಧ ಮಹಿಳಾ ಸ್ವಸಹಾಯ ಸಂಘಗಳಾದ ನವಜ್ಯೋತಿ, ಸ್ಫೂರ್ತಿ, ನವೋದಯ, ಚಿನ್ಮಯ, ಇಂಚರ, ಸೂರ್ಯ ಸಂಘದ ಸದಸ್ಯರು ತರಬೇತಿ ಪಡೆದರು.

ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಪಿಡಿಒ ವಿಂದ್ಯಾ ಹೆಗಡೆ, ರೆ.ಾ. ಅಭಿನವ್, ರೆ.ಾ. ಮ್ಯಾಥ್ಯು, ಪಿ.ಪಿ.ಬೇಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net