ಸ್ವಂತ ಹಣದಲ್ಲಿ ಕಿರು ಸೇತುವೆ ನಿರ್ಮಾಣ

ydg6
ಬಸವಸಾಗರ ಜಲಾಶಯದಿಂದ ನೀರು ಹರಿಸಿದ ಹಿನ್ನೆಲೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಆಮಲಿಂಗೇಶ್ವರ ದೊಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆ.
Published on

ಕೊಡೇಕಲ್: ಕೃಷ್ಣಾ ನದಿ ಪ್ರವಾಹದಿಂದ ಕಿರು ಸೇತುವೆ ಕೊಚ್ಚಿ ಹೋಗಿ ತಿಂಗಳಾದರೂ ಯಾವ ಜನಪ್ರತಿನಿಧಿ ಮತ್ತು ಅಧಿಕಾರಿಗಳು ದುರಸ್ತಿಗೆ ಮುಂದಾಗದ ಕಾರಣ ಆಮಲಿಂಗೇಶ್ವರ ದೊಡ್ಡಿ ಜನರು ತಮ್ಮ ಸ್ವಂತ ಹಣದಲ್ಲಿ ರಸ್ತೆ ಮತ್ತು ಕಿರು ಸೇತುವೆ ನಿರ್ಮಾಣ ಮುಂದಾಗುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ಅಮ್ಮಾಪುರ ಎಸ್.ಕೆ.ಗ್ರಾಮದಿಂದ 4 ಕಿಮೀ ದೂರದ ಕಾನನ ಪ್ರದೇಶದಲ್ಲಿರುವ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ವಾಸಗಿರುವ 20 ಕುಟುಂಬ ದೊಡ್ಡಿಯಿಂದ ಗ್ರಾಮದೊಳಗೆ ಸಂಚಾರ ಮಾಡಲು ತಮ್ಮ ಸ್ವಂತ ಹಣದಿಂದ ದೊಡ್ಡಿ ಬಳಿಯ ಹಳ್ಳಕ್ಕೆ ಕಿರುಸೇತುವೆಯೊಂದು ನಿರ್ಮಿಸಿಕೊಂಡು ಜನ ಜಾನುವಾರುಗಳ ಸಂಚಾರಕ್ಕೆ ಅನುಕೂಲವಾಗಿದೆ. ಈ ಸೇತುವೆ ಪ್ರತಿ ವರ್ಷ ಕೃಷ್ಣೆಯ ಪ್ರವಾಹದಿಂದ ದೊಡ್ಡ ತನ್ನ ಸಂಪರ್ಕ ಕಳೆದುಕೊಳ್ಳುತ್ತದೆ. ಇದರಿಂದ ಬೇಸತ್ತ ಜನರು ತಮ್ಮ ಸ್ವಂತ ಹಣದಿಂದ ನಿರ್ಮಿಸಿಕೊಡು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕೃಷ್ಣಾ ಪ್ರವಾಹದಿಂದ ಕೊಚ್ಚಿ ಹೋದ ಕಿರು ಸೇತುವೆ ತಿಂಗಳಾದರೂ ಯಾವು ಕೂಡ ಇತ್ತ ಗಮನಹರಿಸುತ್ತಿಲ್ಲ. ಅಲ್ಲದೆ ದೊಡ್ಡಿ ಜನರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇವು ಬೇಜವಾಬ್ದಾರಿ ಮತ್ತು ನಿರ್ಲಕ್ಷÈದಿಂದಾಗಿ ತಾವೇ ಸ್ವತಃ ಮುಂದಾಗಿ ಜೆಸಿಬಿ ಮೂಲಕ ಕೆಲಸ ಆರಂಭಿಸಿರುವ ಸುದ್ದಿ ಎಲ್ಲೆಡೆ ಹರಡಿದೆ.

ರಸ್ತೆ ಕೊಚ್ಚಿ ಹೋದ ಸಂದರ್ಭದಲ್ಲಿ ತಾಪಂ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿ ಹೋಗಿದ್ದವರು ಮತ್ತೆ ಇತ್ತಕಡೆ ತಿರುಗಿ ನೋಡಿಲ್ಲ ಎಂಬುದು ದೊಡ್ಡಿ ಜನರು ಆರೋಪಿಸಿದರು. ನಿತ್ಯ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ಕಾರಣ ಸ್ವತಃ ನಾವೆ ಮುಂದಾಗಿ ಈ ಕೆಲಸ ಮಾಡಿಕೊಂಡಿz್ದೆÃವೆ. ಆದರೆ ಮತ್ತೆ ಪ್ರವಾಹದಲ್ಲಿ ರಸ್ತೆ ಕೊಚ್ಚಿಕೊಂಡು ಹೋದರೆ ಏನು ? ಮಾಡೋದು ಎಂಬುದು ದೊಡ್ಡ ಚಿಂತೆಯಾಗಿದೆ. ಅದಕ್ಕಾಗಿ ಶಾಸಕರು ದೊಡ್ಡಿಗೆ ಭೇಟಿ ನೀಡಿ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಬುದ್ದು ರಾಠೋಡ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net