

ವಿಜಯಪುರ:ಇಂದು ಎಲ್ಲರಿಗೂ ಸರಕಾರಿ ನೌಕರಿ ಸಿಗುವುದು ಕಷ್ಟ. ಉದ್ಯೋಗ ಬಯಸುವವರು ಸ್ವಂತ ಉದ್ಯೋಗಿಗಳಾಗಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಿ.ಎಸ್. ದೇಸಾಯಿ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಧಾರವಾಡದ ಕರ್ನಾಟಕದ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಜಿಲ್ಲಾ ಕೈಗಾರಿಕಾ ಕೇಂದ್ರ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ಉದ್ಯಮಶೀಲತಾ ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ, ಸಾಲ ಸೌಲಭ್ಯ ಮತ್ತು ಯಾವ ಉದ್ಯೋಗ ಆರಂಭಿಸಬೇಕೆಂದು ಸಿಡಾಕ್ ಸಂಸ್ಥೆಯು ಮಾರ್ಗದರ್ಶನ ನೀಡುತ್ತಿದೆ. ಅವುಗಳ ಲಾಭ ಪಡೆಯಬೇಕೆಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಸ್. ಕಲ್ಲೂರಮಠ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಕೌಶಲ ಗುರುತಿಸುವ ಮೂಲಕ ಅವರಿಗೆ ತರಬೇತಿ, ಜ್ಞಾನ, ಮಾರ್ಗದರ್ಶನ ನೀಡುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ಅಶ್ವಿನಿ ಯರನಾಳ ಉಪನ್ಯಾಸ ನೀಡಿದರು. ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಮಹೇಶ ಮಾಳವಡೆಕರ ಹಾಗೂ ನಗರದ ಯಶಸ್ವಿ ಮಹಿಳಾ ಉದ್ಯಮಿ ಪಲ್ಲವಿ ವೈದಾಂಡೆ ಮಾತನಾಡಿದರು. ಹಿರಿಯ ಉಪನ್ಯಾಸಕರಾದ ಎಸ್.ಎಸ್. ರಾಜಮಾನೆ, ಡಾ. ಅನಂತ ಸರ್ವಂದೆ, ಡಾ. ಭಾರತಿ ಹೊಸಟ್ಟಿ ಹಾಗೂ ಡಾ. ಭಾರತಿ ಹಾಲು ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿ ತೇಜಸ್ವಿನಿ ಹಾಗೂ ತಂಡದವರು ಪ್ರಾರ್ಥಿಸಿದರು. ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕಿ ಸುಪ್ರೀತಾ ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಪಿ.ಬಿ. ಬಿರಾದಾರ ಪರಿಚಯಿಸಿದರು. ಸರಸ್ವತಿ ಖ್ಯಾಡಿ ನಿರೂಪಿಸಿ, ವಂದಿಸಿದರು. ಉಪನ್ಯಾಸಕ ಎಂ.ಆರ್. ಕೆಂಭಾವಿ, ಆನಂದ ಕುಲಕರ್ಣಿ, ಸಚೀನ ಪಾಟೀಲ, ನೀಲಕಂಠ ಹಳ್ಳಿ, ರಾವೇಂದ್ರ ಗುರ್ಜಾಲ, ಲಕ್ಷಿ$್ಮ ಮೋರೆ ಮತ್ತಿತರರಿದ್ದರು.
* ಫೋಟೋ: ಎಂಎಂ 13&12
ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉದ್ಯಮಶೀಲತಾ ತಿಳಿವಳಿಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಿ.ಎಸ್. ದೇಸಾಯಿ, ಡಾ. ಆರ್.ಎಸ್. ಕಲ್ಲೂರಮಠ, ಪಲ್ಲವಿ ವೈದಾಂಡೆ ಮತ್ತಿತರರಿದ್ದರು.