ಸ್ವ-ಉದ್ಯೋಗದ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಸಾಧ್ಯ

ಸ್ವ-ಉದ್ಯೋಗದ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಸಾಧ್ಯ
Published on

ಹಾಸನ: ನಮ್ಮ ದೇಶದಲ್ಲಿ ಅನೇಕರು ಪದವಿ ಪಡೆದು ಉದ್ಯೋಗ ಬೇಕೆಂದು ಹುಡುಕಾಟ ನಡೆಸುತ್ತಿದ್ದು ಅಂಥವರಿಗೆ ಉದ್ಯೋಗ ಸೃಷ್ಟಿ ಮಾಡುವ, ಸ್ವ-ಉದ್ಯೋಗ ಮಾಡುವ ವ್ಯವಸ್ಥೆ ನಿರ್ಮಾಣ ಆದರೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಸಾಧ್ಯ ಆಗಲಿದೆ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಟಿ.ದ್ಯಾವೇಗೌಡ ತಿಳಿಸಿದರು.
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಅಲ್ಯುಮಿನಿಯಂ ಸಭಾಂಗಣದಲ್ಲಿ ಮಿ-ರೆಜ್ ಫೌಂಡೇಷನ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸ್ಟಾರ್ಟ್‌ಪ್ಸ್ ಎರಡು ದಿನಗಳ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅದರು, ಎರಡು ದಿನದ ಉಪಯುಕ್ತ ಶಿಬಿರದ ಲಾಭ ಪಡೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಶುಭ ಹಾರೈಸಿದರು.
ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಮಿ-ರೆಜ್ ವಿಭಾಗದ ಕಾರ್ಯ ನಿರ್ವಹಣಾಧಿಕಾರಿ ಗೀತಾ ಕಿರಣ್ ಮಾತಾನಾಡಿ, ನಾವು ಕಲಿತಾ ಶಿಕ್ಷಣ ಹಾಗೂ ಅನುಭವ ಇತರರಿಗೆ ಪ್ರಯೋಜನ ವಾಗಬೇಕು ಮತ್ತು ಸಮಾಜ ಸುಧಾರಣೆಯಲ್ಲಿ ಪ್ರಮುಖವಾದಗಿ ಅನೂಕೂಲವಾಗುವಂತಾಗಬೇಕು ಎಂದು ತಿಳಿಸಿದರು.
ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಜಾನ್ಸನ್ ಟೆಲ್ಸ್ ಅವರು ವಿವಿಧ ಕಾಲೇಜಿನಿಂದ ಬಂದಿದ್ದವರಿಗೆ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ಹೇಗೆ ತರಬಹುದು ಮತ್ತು ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಹೇಗೆ ಉಪಯೋಗಿಸಬೇಕು ಎಂದು ಮಾಹಿತಿ ನೀಡಿದರು.
ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎ.ಜೆ. ಕೃಷ್ಣಯ್ಯ ಮಾತನಾಡಿ, ಇಂದಿನ ತರಬೇತಿ ಕಾರ್ಯಕ್ರಮದಲ್ಲಿ ಬಿ.ಐ.ಟಿ. ಇಂಜಿನಿಯರಿಂಗ್ ಕಾಲೇಜ್ ಬೆಂಗಳೂರು, ಸಿಐಟಿ ಗುಬ್ಬಿ, ಎಲ್‌ಬಿಎಸ್ ಕಾಸರಗೋಡು, ಎಂಐಟಿ ಮೈಸೂರು, ಎಂಐಟಿ ಪಾಂಡವಪುರ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿ ಪಡೆಯಲು ಆಗಮಿಸಿರುವವರಿಗೆ ಶುಭ ಕೋರಿದರು.ಈ ತರಬೇತಿ ಇತರರಿಗೆ ಅನೂಕೂಲ ಆಗಬೇಕೆಂದರು.
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ಶಿವರಾಂ ಕೃಷ್ಣಯ್ಯ, ಸಂಸ್ಥೆ ಖಜಾಂಚಿ ಎಸ್. ಶ್ರೀಧರ್, ನಿರ್ದೇಶಕರಾದ ಡಾ.ಎಸ್. ಪ್ರದೀಪ್, ಚೌಡುವಳ್ಳಿ ಜಗದೀಶ್, ಎಚ್.ಕೆ. ಗುರುಮೂರ್ತಿ, ಪ್ರಾಧ್ಯಾಪಕ ಡಾ. ಮೋಹನ್ ಕುಮಾರಿ, ಡಾ. ಎಂ.ಆರ್. ವಿನೂತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net