ಸ್ವ-ಉದ್ಯೋಗಕ್ಕೆ ಸೃಜನಾತ್ಮಕ ಕೌಶಲ ಅಗತ್ಯ

25 YERRISWAMY 04
Published on

ಬಳ್ಳಾರಿ : ಸ್ವಉದ್ಯೋಗ ಕೈಗೊಳ್ಳಲು ಸೃಜನಾತ್ಮಕವಾಗಿ ಹೊಸ ವಿಧದ ಕೌಶಲ್ಯ ತರಬೇತಿ ಹೊಂದಬೇಕು ಎಂದು ಜಿಪಂ ಯೋಜನಾಧಿಕಾರಿ ಪಿ. ಪ್ರಮೋದ ಹೇಳಿದರು.
ಇಲ್ಲಿನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ನಡೆದ 30 ದಿನಗಳ ಬ್ಯೂಟಿ ಪಾರ್ಲರ್ ತರಬೇತಿ ಮತ್ತು 10 ದಿನಗಳ ಕುರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವರಿಂದ, ಬ್ಯೂಟಿ ಪಾರ್ಲರ್‌ನಲ್ಲಿ ವಿವಿಧ ಕೌಶಲ್ಯವನ್ನು ಬೆಳಸಿಕೊಳ್ಳಬೇಕು. ಅದೇ ರೀತಿಯಾಗಿ ಕುರಿ ಸಾಕಾಣಿಕೆಯು ವ್ಯವಸಾಯದ ಜೊತೆಗೆ ಪೂರಕವಾಗಿದ್ದು, ಕುರಿಗಳಿಗೆ ತುಂಬಾ ಬೇಡಿಕೆ ಇದೆ. ಕುರಿ ಸಾಕಾಣಿಕೆ ತರಬೇತಿಯ ಸದುಪಯೋಗ ಪಡಿಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಇಂತಹ ತರಬೇತಿಗಳು ಸಹಕಾರಿಯಾಗಲಿ ಎಂದು ಅವರು ಹಾರೈಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಅಜಿತ್ ನಾಯ್ಕ ಮಾತನಾಡಿ, ಮಹಿಳೆಯರು ಮನೆಯಲ್ಲಿ ಕುಳಿತು ಬ್ಯೂಟಿ ಪಾರ್ಲರ್ ಮಾಡುವದರಿಂದ ಕೌಟುಂಬಿಕ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net