

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಸ್ಲಮ್ಳಿಗೆ ಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಲಮ್ ಬೋರ್ಡ್ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಎಚ್ಚರಿಕೆ ನೀಡಿದ್ದಾರೆ.
ಪೂರ್ವ ಕ್ಷೇತ್ರದ ಸಂತೋಷ ನಗರ ಮತ್ತು ಅಜ್ಮೀರ್ ನಗರದಲ್ಲಿ ಸಾರ್ವಜನಿಕ ಬೋರ್ವೆಲ್ ನೀರಿನ ಸಂಪರ್ಕಕ್ಕೆ ಶನಿವಾರದಂದು ಚಾಲನೆ ನೀಡಿದ ಅವರು, ಸ್ಥಳೀಯರ ಅಹವಾಲು ಸ್ವೀಕರಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.
ಸಮರ್ಪಕ ಕುಡಿಯುವ ನೀರಿನ ಕೊರತೆ, ಘನ ತ್ಯಾಜ್ಯ ವಿಲೇವಾಹನ ಬರುತ್ತಿಲ್ಲ. ಬೀದಿದೀಪಗಳ ಸಮಸ್ಯೆ ಸೇರಿದಂತೆ ಅನೇಕ ಅಹವಾಲುಗಳನ್ನು ಸರ್ವಾಜನಿಕರು ಶಾಸಕರ ಗಮನ್ನಕೆ ತಂದರು.
ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡ ಶಾಸಕರು, ಪೂರ್ವ ಕ್ಷೇತ್ರ ಅತೀ ಹೆಚ್ಚು ಸ್ಲಮ್ ಹೊಂದಿದ ಪ್ರದೇಶ. ಸ್ಲಮ್ ನಿವಾಸಿಗಳಿಗೆ ಸೌಕರ್ಯ ಒದಗಿಸುವಲ್ಲಿ ಮೀನಾಮೇಷ ಮಾಡುವ ಅಧಿಕಾರಿಗಳನ್ನು ಕೂಡಲೇ ಬೆರೆಡೆ ವರ್ಗಾವಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ ನೀರಿನ ಸೌಲಭ್ಯ ಕಲ್ಪಿಸುವಂತೆ ವಲಯ ಆಯುಕ್ತರಿಗೆ ಹೇಳಿದ ಶಾಸಕರು, ಪ್ರತಿ ನಿತ್ಯ ಕಸವಿಲೇವಾರಿ ವಾಹನ ಸೌಲಭ್ಯ ಒದಗಿಸುವಂತೆ ತಾಕೀತು ಮಾಡಿದರು. ಸ್ಲಮ್ವಾಸಿಗರಿಗೆ ಯಾವುದೇ ಮೂಲ ಸೌಕರ್ಯ ಕೊರತೆ ಆಗದಂತೆ ಎಚ್ಚರಿಸಿದರು.
ಪಾಲಿಕೆ ವಲಯ ಆಯುಕ್ತ ಎಂ.ಬಿ. ಸಬರದ, ಪಾಲಿಕೆ ಕಾರ್ಯನಿರ್ವಾಹಕ ಇಂಜನಿಯರ್ ವಿಜಯ ಕುಮಾರ, ಮುಖಂಡರಾದ ಮುಸ್ತಾಕ್ ಮುದಗಲ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಮೆಹಬೂಬ್ ನಾಲಬಂದ್, ಶೋಭಾ ಕಮತರ, ಅಬ್ಬು ಬಿಜಾಪುರ ಹಾಗೂ ಇತರರು ಇದ್ದರು.