ಸ್ಲಂ ಬೋರ್ಡ್ ಮನೆ ಭ್ರಷ್ಟಾಚಾರ ನಡೆದಿಲ್ಲ

Jewargi
Published on

ಕಲಬುರಗಿ: ಜೇವರ್ಗಿ ಪಟ್ಟಣದಲ್ಲಿ ನಿರ್ಮಿಸಿದ ಸ್ಲಂ ಬೋರ್ಡ್ ಮನೆಗಳಲ್ಲಿ ಅವ್ಯವಹಾರ ಅಥವಾ ಭ್ರಷ್ಟಾಚಾರ ನಡೆದಿಲ್ಲ ಎಂದು ಜೇವರ್ಗಿ ಪ್ರಗತಿ ಪರ ಚಿಂತಕರ ವೇದಿಕೆಯ ಅಬ್ದುಲ್ ರೆಹಮಾನ್ ಪಟೇಲ್ ಹೇಳಿದರು.

ಶಾಸಕರ ಹಾಗೂ ಗುತ್ತಿಗೆದಾರರ ಮುತುವರ್ಜಿಯಿಂದ ಅತ್ಯುತ್ತಮ ಮನೆಗಳ ನಿರ್ಮಾಣ ಆಗುತ್ತಿವೆ. ಇದನ್ನು ಸಹಿಸದ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಜಿಲ್ಲೆಗೆ ಮೊದಲ ಬಾರಿ ಮಂಜೂರಾಗಿದ್ದ ೪೦೦ ಮನೆಗಳ ನಿರ್ಮಾಣ ಆಗಿದೆ. ೧೧೦ ಮನೆ ನಿರ್ಮಾಣಕ್ಕೆ ಕೆಲವರು ಕಿರುಕುಳ ನೀಡಿದ್ದಾರೆ. ಆದರೆ, ಶಾಸಕರು ಜನರಿಗೆ ಒಳ್ಳೆಯದು ಮಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

೨೦೧೮-೧೯ ಹಾಗೂ ೨೦೧೯-೨೦ರಲ್ಲಿನ ಸ್ಲಂ ಬೋರ್ಡ್ ಮನೆಗಳ ನಿರ್ಮಾಣದ ಬಜೆಟ್ ೭೫ ಕೋಟಿ ರೂ. ಇಲ್ಲ. ಅದು ಹೇಗೆ ಅಷ್ಟೊಂದು ಭ್ರಷ್ಟಾಚಾರ ಮಾಡಲು ಸಾಧ್ಯ?. ಮನೆಗಳನ್ನು ಗುಣಮಟ್ಟದಲ್ಲಿ ನಿರ್ಮಿಸಿದ್ದರಿಂದ ಶ್ರೀಮಂತರ ಮನೆಯಂತೆ ಕಾಣುತ್ತಿವೆ ಎಂದು ಹೇಳಿದರು.

ವಕೀಲ ಮಲ್ಲಿಕಾರ್ಜುನ ಎಂ.ದಿನ್ನಿ ಮಾತನಾಡಿ, ೭೫೦ ಮನೆ ಪ್ರಾರಂಭಿಸುವಾಗ ಒಟ್ಟು ಮೊತ್ತ ೪೯ ಕೋಟಿ ರೂ. ಇದೆ. ೭೫೦ ಮನೆಗಳಲ್ಲಿ ೨೫೦ ಮನೆ ಬೆಸ್‌ಮೆಂಟ್, ೧೦೦ ಮನೆ ನೆಂಟಲ್, ೧೫೦ ಮನೆ ರೂï, ೨೦೦ ಮನೆಗಳು ಸಂಪೂರ್ಣ ಮುಗಿವೆ. ೫೦ ಮನೆಗಳವರು ಮಾತ್ರ ಡಿಡಿ ಕಟ್ಟಿದ್ದು ಕೆಲಸ ಆರಂಭ ಆಗಲಿದೆ ಎಂದು ಹೇಳಿದರು.

೪೯ ಕೋಟಿ. ರೂ. ಅನುದಾನದಲ್ಲಿ ೧೨ ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಎಲ್ಲ ಮನೆಗಳು ಸ್ಥಳದಿಂದ ಜಿಪಿಎಸ್ ಮಾಡಲಾಗಿದೆ. ಲೂಟಿ ಹೊಡೆಯುವ ಕೆಲಸವಾಗದೇ, ಕೆವಲ ಬಡವರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.

ಜೇವರ್ಗಿಯ ಶಿವಕುಮಾರ ಮಂದೇವಾಲ್, ಭೀಮರಾಯ ಹಳ್ಳಿ, ಪರಶುರಾಮ ಆಳಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net