

ಕಲಬುರಗಿ: ಉಸ್ತುವಾರಿ ಸಚಿವ ಪ್ರಿಯಾಂಕ್ ರ‍್ಖಗೆ ಕ್ಷೇತ್ರದಲ್ಲೇ ಮೂಗಿನ ನೇರದಲ್ಲೇ ಅಕ್ರಮ ಮರಳು ಸಾಗಣೆಯ ಹಗಲು ದರೋಡೆ ನಡೆಯುತ್ತಿದೆ. ಗಣಿ ಇಲಾಖೆಗೂ ಗುತ್ತಿಗೆದಾರರ ವಿರುದ್ಧ ದಂಡ ಹಾಕಿದ್ದಾರೆ. ಜಿಲ್ಲಾಧಿಕಾರಿ ಟೇಬಲ್ ಮೇಲೆ ಗಣಿ ಅಧಿಕಾರಿಗಳು ನೀಡಿದ ವರದಿ ಇದೆ. ಆದರೂ, ಅಕ್ರಮ ಮರಳುಕೋರರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಗೌರವಾಧ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಿಡಿ ಕಾರಿದರು.
ಅಕ್ರಮ ಮರಳು ದಂಧೆಯಲ್ಲಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಭಾಗಿಯಾಗಿದ್ದು, ಎಂಜಲು ಕಾಸಿಗೆ ನಾಲಿಗೆ ಚಾಚಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ‍್ಖಗೆಗೆ ಧಮ್ಮು, ತಾಕತ್ತು ಇದ್ದರೆ, ಎಲ್ಲರ ಮೇಲೆ ಶಿಸ್ತು ಕ್ರಮ ಕೈಗೊಂಡು ಪ್ರಾಮಾಣಿಕ ಸಚಿವ ಎಂದು ಸಾಬೀತು ಮಾಡಲಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ಚಿತ್ತಾಪುರ ೇತ್ರದಲ್ಲಿ ನಂಬರ್ ಪ್ಲೇಟ್ ಇಲ್ಲದ, ಒಂದೇ ರಾಯಲ್ಟಿ ಮೇಲೆ ೫ ಟಿಪ್ಪರ್ ಓಡಾಟ, ಒಂದು ಟ್ರಿಪ್ ಗೆ ೧೦ ಟನ್ ಬದಲಿ ೫೦ಟನ್ ಮರಳು ಸಾಗಿಸುತ್ತಿದ್ದು, ನಿತ್ಯ ಅಕ್ರಮ ೫೦೦ ಟಿಪ್ಪರ್ಗಳಿಗಿಂತಲೂ ಅಧಿಕ ಟ್ರಿಪ್ ಮರಳು ಸಾಗಿಸಲಾಗುತ್ತಿದೆ. ಜಿಲ್ಲಾಧಿಕಾರಿ, ಗಣಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಪ್ರಯೋಜನವಾಗಿಲ್ಲ. ಪ್ರಾಮಾಣಿಕ ಎಂದು ಸಂವಿಧಾನ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಮಂತ್ರಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲಿ ಎಂದು ಸವಾಲು ಹಾಕಿದರು.
ಬಿಜೆಪಿ ರ‍್ಕಾರದಲ್ಲಿ ಶಾಸಕರಾಗಿದ್ದ ಇದೇ ಪ್ರಿಯಾಂಕ್ ರ‍್ಖಗೆ ಯುವಕನೊಬ್ಬ ಮರಳು ಸಾಗಣೆಗೆ ಅನುಮತಿ ಕೇಳಿದಾಗ ವಿರೋಧಿಸಿದ್ದರು. ಆ ಆಡಿಯೋವನ್ನು ಬೆಂಬಲಿಗರು ನಮ್ಮ ಶಾಸಕರು ಪ್ರಾಮಾಣಿಕರೆಂದು ವೈರಲ್ ಮಾಡಿದ್ದರು. ಈಗ ಅವರೇ ಸಚಿವರಿದ್ದು, ಇವರ ಪಾಲು ಎಷ್ಟು ಎಂದು ಪ್ರಶ್ನಿಸಿದರು.
ಚಿತ್ತಾಪುರದಲ್ಲಿ ೧೫೦೦ ಕೋಟಿ ಅಕ್ರಮ ನಡೆದಿದೆ ಎಂದು ಮಣಿಕಂಠ ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದಾರೆ. ನಿಮ್ಮ ಅಧಿಕಾರಿಗಳೇ ನೀಡಿರುವ ವರದಿ ಆಧಾರದ ಮೇಲೆ ಎಲ್ಲರ ವಿರುದ್ಧ ಬಿಲ್ಡ್ಅಪ್ ಸ್ಟೆಟ್ಮೆಂಟ್ ಕೊಡೋದು ಬಿಟ್ಟು ಆ್ಯನ್ ತೆಗೆದುಕೊಳ್ಳಿ ಎಂದು ಸವಾಲ್ ಹಾಕಿದರು.
ಶ್ರೀರಾಮ ಸೇನೆ ಜಿಲ್ಲಾಧ್ಯ ರಾಕೇಶ ಜಮಾದಾರ, ಜೇರ‍್ಗಿ ತಾಲೂಕು ಅಧ್ಯಕ್ಷ ಮಲ್ಕಣ್ಣ ಹಿರೇಪೂಜಾರಿ, ಮಲ್ಲನಗೌಡ ಕಟ್ಟಿಸಂಗಾವಿ, ಹುಲ್ಲೇಶ ಕಾಸರಬೋಸಗಾ ಇತರರಿದ್ದರು.