

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಅಪರೂಪದ ಕಡಲ ಜೀವಿ ಸ್ಯಾಂಡ್ ಡಾಲರ್ಗಳು ಕಂಡು ಬಂದಿವೆ.
ಸ್ಟಾರ್ ಫಿಶ್ಗಳ ವರ್ಗಕ್ಕೆ ಸೇರಿದ ಇವು ಸಮುದ್ರದಲ್ಲಿ ಅಂದಾಜು 19 ಮೀಟರ್ ಆಳದಲ್ಲಿ ಜೀವಿಸುತ್ತವೆ. ನಾಲ್ಕು ಇಂಚಿನವರೆಗೆ ಬೆಳೆಯುವ ಇವು ನಾಣ್ಯದಂತೆ ಕಾಣುತ್ತವೆ. ಮೇಲ್ಮೈಯಲ್ಲಿ ಹೂವಿನ ಆಕಾರದ ಚಿತ್ರವಿರುತ್ತವೆ. ತಳ ಭಾಗದಲ್ಲಿ ಬಾಯಿಯನ್ನು ಹೊಂದಿದ್ದು, ಸಣ್ಣ ಮೀನು, ಸಮುದ್ರ ಪಾಚಿಗಳನ್ನು ತಿಂದು 8 ವರ್ಷದವರೆಗೂ ಬದುಕುತ್ತವೆ. 2006ರ ಹೊತ್ತಿಗೆ ಭಟ್ಕಳದಲ್ಲಿ ಇವು ಕಾಣಿಸಿಕೊಂಡ ವರದಿ ಇದೆ ಎಂದು ಸಾಗರ ಜೀವ ಶಾಸ್ತ್ರಜ್ಞ ಡಾ.ಶಿವಕುಮಾರ ಹರಗಿ ಮಾಹಿತಿ ನೀಡಿದ್ದಾರೆ.
EndFragment