ಸ್ಮಾರ್ಟ್‌ಸಿಟಿಯಿಂದ ನಗರಗಳ ಅಭಿವೃದ್ಧಿ

h25-smart city
Published on

ಹುಬ್ಬಳ್ಳಿ : ನಗರದಲ್ಲಿ ಗುರುವಾರ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸುಸ್ಥಿರ ನಗರಗಳ ಭಾರತ ಕಾರ್ಯಕ್ರಮದ ಸಿಟಿ ಸ್ಪ್ರಿಂಟ್ ಕಾರ್ಯಾಗಾರ ಆಯೋಜಿಸಲಾಗಿತ್ತು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಉದ್ಘಾಟಿಸಿದರು. ಸ್ಮಾರ್ಟ್‌ಸಿಟಿ ಮಿಷನ್‌ನ ಜಂಟಿ ಕಾರ್ಯದರ್ಶಿ ಕುನಾಲ್ ಕುಮಾರ್ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯು ನಗರಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಹುಬ್ಬಳ್ಳಿ -ಧಾರವಾಡ ಮಹಾನಗರವು ಇತರ ನಗರಗಳಿಗೆ ಮಾದರಿಯಾಗುವ ರೀತಿಯಲ್ಲಿ ಬೆಳೆವಣಿಗೆಯಾಗಬೇಕು ಎಂದು ಹೇಳಿದರು.
ದೇಶಪಾಂಡೆ ಫೌಂಡೇಷನ್ ಸಿಇಒ ಅರವಿಂದ ಚಿಂಚೋರೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಅರ್ಬನ್ ಅಫೇರ್ಸ್ ಕಾರ್ಯಕ್ರಮ ನಿರ್ದೇಶಕ ನಯೀಮ್ ಕೆರೂವಾಲಾ, ವಿಶ್ವ ಆರ್ಥಿಕ ವೇದಿಕೆ ಸಿಫೋರ್ ಐಆರ್ ನ ಪುರುಷೋತ್ತಮ ಕೌಶಿಕ್, ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net