ಸ್ಮಾರ್ಟ್​ಸಿಟಿ ಕಾಮಗಾರಿಗಳ ವೀಕ್ಷಣೆ

h25-Smart city
Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಹಾಗೂ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಸಂಸ್ಥೆಯ ಅಧ್ಯಕ್ಷ ಡಾ. ರವಿಕುಮಾರ ಸುರಪುರ ಅವರು ಸ್ಮಾರ್ಟ್​ಸಿಟಿ ಯೋಜನೆಯಡಿ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳ ವೀಕ್ಷಣೆಯನ್ನು ಶುಕ್ರವಾರ ಮಾಡಿದರು.

ಪ್ರಗತಿಯಲ್ಲಿರುವ ಕಾಮಗಾರಿಗಳಾದ ತೋಳನಕೆರೆಯ ಪುನರ್ ಅಭಿವೃದ್ಧಿ ಕಾಮಗಾರಿಯ ಸ್ಥಳ, ಮಲ್ಟಿಲೇವಲ್ ಕಾರ್ ರ್ಪಾಂಗ್ ನಿಮಾಣ ಕಾಮಗಾರಿ, ಜನತಾ ಬಜಾರ ಪುನರ್ ನಿಮಾಣ ಕಾಮಗಾರಿ, ಮೀನು ಮಾರುಕಟ್ಟೆಯ ಪುನರ್ ನಿಮಾಣ ಕಾಮಗಾರಿ, ಸ್ಮಾರ್ಟ್ ರಸ್ತೆಗಳ ನಿಮಾಣ ಕಾಮಗಾರಿ, ಬೆಂಗೇರಿ ಮಾರುಕಟ್ಟೆಯ ಪುನರ್ ನಿಮಾಣ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು.

ಘನತ್ಯಾಜ್ಯ ತೋಳನಕೆರೆಗೆ ಸೇರದಂತೆ ಕ್ರಮಕೈಗೊಳ್ಳಲು, 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು, ಪಕ್ಷಿವಿಹಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಲು ಸೂಚಿಸಿದರು.

ಮಲ್ಟಿಲೇವಲ್ ಕಾರ್ ರ್ಪಾಂಗ್ ಸ್ಥಳದಲ್ಲಿ ತಡೆಗೋಡೆ ನಿರ್ವಿುಸಿ, ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಕಾಮಗಾರಿಗಳನ್ನು 1 ತಿಂಗಳ ನಂತರ ಅವಲೋಕಿಸಿ ಪ್ರಗತಿ ಕಂಡು ಬರದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದರು.ಸ್ಮಾರ್ಟ್ ರಸ್ತೆಗಳ ಪ್ಯಾಕೇಜ್ ಕಾಮಗಾರಿಗಳನ್ನು ವೀಕ್ಷಿಸಿದ ಡಾ. ರವಿಕುಮಾರ ಸುರಪುರ ಅವರು, ಚರಂಡಿಯ ಹೊದಿಕೆಯನ್ನು ನಿಯಮಿತ ಅಂತರದಲ್ಲಿ ಅಳವಡಿಸಲು, ಕಾಮಗಾರಿಯ ಗುಣಮಟ್ಟ ಪರೀಕ್ಷಿಸಲು, ಜನತಾ ಬಜಾರ ಕಾಮಗಾರಿಯನ್ನು 8 ತಿಂಗಳ ಅವಧಿಯಲ್ಲಿ ಹಾಗೂ ಉಳಿದ ಕಾಮಗಾರಿಯನ್ನು 3 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ನಿರ್ದೇಶಿಸಿದರು. ಹು-ಧಾ ಸ್ಮಾರ್ಟ್​ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net