ಸ್ಮಾರ್ಟ್‌ಮೀಟರ್ ಅಳವಡಿಕೆಗೆ ವಿರೋಧ

Published on

ಚಾಮರಾಜನಗರ: ಗೃಹಬಳಕೆದಾರರಿಗೆ ರಾಜ್ಯಸರ್ಕಾರ ಸ್ಮಾರ್ಟ್‌ಮೀಟರ್ ಅಳವಡಿಕೆ ಮಾಡುತ್ತಿದ್ದು, ಇದು ಸಾರ್ವಜನಿಕರ ಮೇಲೆ ಹೇರುತ್ತಿರುವ ಸರ್ಕಾರದ ಹಗಲುದರೋಡೆಯಾಗಿದೆ ಎಂದು ಜಿಲ್ಲಾರೈತಸಂಘ, ಹಸಿರುಸೇನೆ ಜಿಲ್ಲಾಧ್ಯಕ್ಷ ಹೊನ್ನೂರುಬಸವಣ್ಣ ಆರೋಪಿಸಿದರು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಏಪ್ರಿಲ್ ತಿಂಗಳಿಂದ ಗೃಹಬಳಕೆದಾರರಿಗೆ 1ಕೆವಿಗೆ 120, 2ಕೆವಿಗೆ 280 ರೂ.ನಿಗಧಿಮಾಡಿದೆ. ಗ್ರಾಹಕರ ಅಭಿಪ್ರಾಯಪಡದೇ, ಯೂನಿಟ್‌ಗೆ 7ರೂ.ಗಳನ್ನು ನಿಗಧಿಮಾಡಿದ್ದಾರೆ. ಮುಂದಿನ ತಿಂಗಳಿಂದ 1ರೂ.ಗಳನ್ನು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 1ಕೆವಿಗೆ 600 ರೂ. ಇದ್ದ ಶುಲ್ಕವನ್ನು 10ಸಾವಿರ ರೂ.ಗಳಿಗೆ ಏರಿಕೆಮಾಡಿರುವುದು ಸಾರ್ವಜನಿಕರು ವಿದ್ಯುತ್ ಶುಲ್ಕ ಕಟ್ಟಲು ಪರದಾಡುವಂತ ಸ್ಥಿತಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರೀಪೇಯ್ಡ ಸ್ಮಾರ್ಟ್‌ಮೀಟರ್ ಅಳವಡಿಕೆ ಕೈಬಿಡಬೇಕು. ಒಂದು ವೇಳೆ ಅಳವಡಿಸಲು ಮುಂದಾದರೆ ಚಾಮರಾಜನಗರ ಜಿಲ್ಲೆಯಿಂದಲೇ ಸ್ಮಾರ್ಟ್‌ಮೀಟರ್ ಬಿಚ್ಚಿ, ಸರ್ಕಾರಕ್ಕೆ ಹಿಂದಿರುಗಿಸುವ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಸಂಘಟನಾಕಾರ್ಯದರ್ಶಿ ಹೆಗ್ಗೊಠಾರವಿಜಯಕುಮಾರ್ ಮಾತನಾಡಿ, ಸರ್ಕಾರ ಪ್ರೀಪೇಯ್ಡ ಸ್ಮಾರ್ಟ್ ಮೀಟರ್‌ಅಳವಡಿಕೆಗೆ ಮುಂದಾಗಿರುವುದು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರವೇ ಆಗಿದೆ. ಯಾವುದೇ ಕಾರಣಕ್ಕೂ ರೈತಸಂಘ ಪ್ರೀಪೇಯ್ಡ ಸ್ಮಾರ್ಟ್ ಮೀಟರ್‌ಅಳವಡಿಕೆಗೆ ಬಿಡುವುದಿಲ್ಲ ಎಂದರು.

ಗೋಷ್ಠಿಯಲ್ಲಿ ಚಾಮರಾಜನಗರ ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾಉಪಾಧ್ಯಕ್ಷ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಮೇಲಾಜಿ ಪುರಕುಮಾರ್, ಮುಖಂಡ ಮೂರ್ತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net