ಸ್ಮಾರಕ ಸಾವಿರಾರು ಹೋರಾಟಗಾರರ ತ್ಯಾಗ, ಸ್ಥೈರ್ಯದ ಪ್ರತೀಕ

2 ckm 5
ಚಿಕ್ಕಮಗಳೂರಿನ ಹೊಸಮನೆ ಸರ್ಕಲ್‌ನಲ್ಲಿ ಬ್ರಿಗೇಡ್ ಗ್ರೂಪ್‌ನ ಸಿಎಸ್‌ಆರ್ ವಿಭಾಗವಾದ ಬ್ರಿಗೇಡ್ ಫೌಂಡೇಶನ್ ಸಂಸ್ಥೆ ಭಾರತದ ಸ್ವಾತಂತ್ರÈ ಹೋರಾಟಗಾರರ ಗೌರವಾರ್ಥವಾಗಿ ಸ್ಥಾಪಿಸಿರುವ ಸ್ಮಾರಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು. ಎಚ್.ಡಿ.ತಮ್ಮಯ್ಯ, ಎಸ್.ಎಲ್.ಭೋಜೇಗೌಡ, ಎಂ.ಆರ್.ಜೈಶAಕರ್, ಸಂಜಯ್ ಮೋಹೆ, ಮೀನಾ ನಾಗರಾಜ್, ಎಚ್.ಎಸ್.ಕೀರ್ತನಾ, ವಿಕ್ರಮ ಅಮಟೆ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸ್ವತಂತ್ರÈ ಹೋರಾಟಗಾರರ ಗೌರವಾರ್ಥವಾಗಿ ಕಾಫಿನಾಡಿನಲ್ಲಿ ಸ್ಮಾರಕ ಸ್ಥಾಪಿಸುವ ಮೂಲಕ ಬ್ರಿಗೆಡ್ ಫೌಂಡೇಷನ್ ಚಿಕ್ಕಮಗಳೂರಿನಲ್ಲಿ ಹೊಸದೊಂದು ವಿಶಿಷ್ಟ ಸ್ಥಳ ರೂಪಿಸಿದೆ. ಶಾಲೆಯ ಸಮೀಪದಲ್ಲೇ ಸ್ಮಾರಕ ನಿರ್ಮಾಣವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಈ ಸ್ಥಳ ಸ್ಪೂರ್ತಿ ತುಂಬಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟರು.

ನಗರದ ಹೊಸಮನೆ ಸರ್ಕಲ್‌ನಲ್ಲಿ ಬ್ರಿಗೇಡ್ ಗ್ರೂಪ್‌ನ ಸಿಎಸ್‌ಆರ್ ವಿಭಾಗವಾದ ಬ್ರಿಗೇಡ್ ಫೌಂಡೇಶನ್ ಸಂಸ್ಥೆ ಭಾರತದ ಸ್ವಾತಂತ್ರÈ ಹೋರಾಟಗಾರರ ಗೌರವಾರ್ಥವಾಗಿ ಸ್ಥಾಪಿಸಿರುವ ಸ್ಮಾರಕವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕಮಗಳೂರಿನ ಪ್ರಮುಖ ಜಂಕ್ಷನ್‌ನಲ್ಲಿ ಸ್ಮಾರಕ ಸ್ಥಾಪಿಸಲಾಗಿದೆ. ಈ ವಿಶಿಷ್ಟ ಸ್ಮಾರಕವು ಸಾವಿರಾರು ಹೋರಾಟಗಾರರ ತ್ಯಾಗ, ಸ್ಥೈರ್ಯದ ಪ್ರತೀಕವಾಗಿದೆ. ಇದು ರಾಷ್ಟçದ ಹೆಮ್ಮೆಯ ಸಂಕೇತವಾಗಿದ್ದು, ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಬಣ್ಣಿಸಿದರು.

ಬ್ರಿಗೇಡ್ ಫೌಂಡೇಶನ್ ಮತ್ತು ಬ್ರಿಗೇಡ್ ಗ್ರೂಪ್‌ನ ಅಧ್ಯಕ್ಷ ಎಂ.ಆರ್.ಜೈಶAಕರ್ ಮಾತನಾಡಿ, ಧೈರ್ಯ, ಒಗ್ಗಟ್ಟು, ತ್ಯಾಗ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭರವಸೆಯ ಆದರ್ಶಗಳ ಅಡಿಪಾಯದ ಮೇಲೆ ನಮ್ಮ ಸ್ವಾತಂತ್ರö್ಯ ಹೋರಾಟ ರೂಪುಗೊಂಡಿತ್ತು. ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರು ನಿಮ್ಮನ್ನು ಕಂಡುಕೊಳ್ಳುವ ಉತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು ಎಂದು ಹೇಳಿದ್ದಾರೆ. ಅದೇ ಪ್ರಕಾರವಾಗಿ ನಮ್ಮ ಸ್ವಾತಂತ್ರö್ಯ ಚಳವಳಿಯಲ್ಲಿ ಭಾಗವಹಿಸಿದ ಪುರುಷರು ಮತ್ತು ಮಹಿಳೆಯರು ಇತರರಿಗಾಗಿ ದುಡಿದರು. ತಮಗಿಂತ ಹೆಚ್ಚಾಗಿ ದೇಶವನ್ನು ಪ್ರೀತಿಸಿ ಗೌರವಿಸಿದರು. ಅವರು ಸಾರಿದ ಮೌಲ್ಯಗಳು ಮುಂದಿನ ತಲೆಮಾರುಗಳಿಗೆ ದಾಟಲಿ ಎಂಬ ಉz್ದೆÃಶ ಸಾಕಾರಕ್ಕಾಗಿ ನಾವು ಮಾಡಿರುವ ಸಣ್ಣ ಪ್ರಯತ್ನ ಈ ಸ್ಮಾರಕ. ಜನರು ಅದರಲ್ಲೂ ವಿಶೇಷವಾಗಿ ಯುವಜನತೆ ಈ ಸ್ಮಾರಕವನ್ನು ನೋಡಿದಾಗ ಒಂದು ಕ್ಷಣ ನಿಂತು ಹಿರಿಯರ ಕುರಿತು ಯೋಚಿಸಿ ಸ್ಫೂರ್ತಿ ಪಡೆಯಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.

ಸ್ಮಾರಕದ ವಾಸ್ತುಶಿಲ್ಪಿ ಸಂಜಯ್ ಮೋಹೆ ಮಾತನಾಡಿ, ಈ ಸ್ಮಾರಕದ ಮೂಲಕ ಸ್ವಾತಂತ್ರö್ಯ ಹೋರಾಟಗಾರರ ಶ್ರಮ, ಕಷ್ಟ, ಛಲವನ್ನು ದಾಖಲಿಸುತ್ತಿz್ದÉÃವೆ ಮತ್ತು ಕಲ್ಲುಗಳ ರಚನೆಯ ಮೂಲಕ ಹೋರಾಟದ ಕಿಚ್ಚನ್ನು ದಾಟಿಸುತ್ತಿz್ದÉÃವೆ. ಜನರು ಈ ಸ್ಮಾರಕದ ಮೂಲಕ ಸ್ಫೂರ್ತಿ ಪಡೆಯುತ್ತಾರೆ ಎಂಬುದು ನಮ್ಮ ನಂಬಿಕೆ. ಈ ಸ್ಮಾರಕವು ಶಾಲೆ ಪಕ್ಕ ನಿರ್ಮಿತಗೊಂಡಿದ್ದು, ಸ್ಮಾರಕ ಭೂತಕಾಲವನ್ನು ಪ್ರತಿನಿಧಿಸಿದರೆ ಶಾಲೆಯು ಭವಿಷ್ಯವನ್ನು ಪ್ರತಿನಿಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸ್ಮಾರಕವನ್ನು ಪ್ರವೇಶಿದಾಗ ಮಹಾತ್ಮ ಗಾಂಧಿ ಅವರು ಚರಕ ಸುತ್ತುವ ಭಂಗಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಣಿ ಅಬ್ಬಕ್ಕ ಚೌಟ, ಕಿತ್ತೂರು ರಾಣಿ ಚೆನ್ನಮ್ಮ, ಗೋಪಾಲ ಕೃಷ್ಣ ಗೋಖಲೆ, ಡಾ. ಬಿ.ಆರ್.ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತಿç, ಡಾ. ರಾಜೇಂದ್ರ ಪ್ರಸಾದ್, ಲಾಲಾ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್, ಮೌಲಾನಾ ಅಬುಲ್ ಕಲಾಂ ಆಜಾದ್, ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಮಂಗಲ್ ಪಾಂಡೆ, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ರಾಣಿ ಲಕ್ಷ್ಮೀಬಾಯಿ, ನಾನಾ ಸಾಹೇಬ್, ದಾದಾಭಾಯಿ ನವರೋಜಿ, ವಿನಾಯಕ ದಾಮೋದರ ಸಾವರ್ಕರ್ ಮತ್ತು ಕಡಿದಾಳ್ ಮಂಜಪ್ಪ ಅವರಂಥ ಪ್ರಮುಖ ಸ್ವಾತಂತ್ರö್ಯ ಹೋರಾಟಗಾರ ಕಲ್ಲಿನ ಕೆತ್ತನೆಗಳನ್ನು ಈ ಸ್ಮಾರಕ ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಎಸ್‌ಪಿ ವಿಕ್ರಮ ಅಮಟೆ, ಐಪಿಎಸ್ ಮತ್ತು ಸಿಎಂಸಿ ಕೌನ್ಸಿಲ್ ಅಧ್ಯಕ್ಷ ಸಂದೀಪ್ ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net