

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ಬಂಡಿಗೆರೆ ಎಲ್ಲೆಗೆ ಸೇರಿದ ಜಾಗದಲ್ಲಿ ಹರದನಹಳ್ಳಿ ಗ್ರಾಮಸ್ಥರಿಗೆ ಮಂಜೂರು ಮಾಡಿರುವ ಸ್ಮಶಾನ ಜಾಗವನ್ನು ಹದ್ದುಬಸ್ತು ಮಾಡಿಸಿಕೊಡುವಂತೆ ಒತ್ತಾಯಿಸಿ ಗುರುವಾರ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರಿಗೆ ಮನವಿ ಸಲ್ಲಿಸಿ ಗ್ರಾಮಸ್ಥರು ಮಾತನಾಡಿ, ಬಂಡಿಗೆರೆ ಎಲ್ಲೆಗೆ ಸೇರಿದ ಸರ್ವೇ ನಂ.184 ರಲ್ಲಿ ಸ್ಮಶಾನ ವಂಚಿತ ಹರದನಹಳ್ಳಿ ಗ್ರಾಮಸ್ಥರಿಗೆ ಸಾರ್ವಜನಿಕ ಸ್ಮಶಾನಕ್ಕಾಗಿ 20 ಗುಂಟೆ ಜಾಗವನ್ನು ಜಿಲ್ಲಾಡಳಿತದಿಂದ ಮಂಜೂರು ಮಾಡಲಾಗಿದೆ. ಸದರಿ ಸ್ಮಶಾನ ಭೂಮಿಯನ್ನು ಹದ್ದುಬಸ್ತು ಮಾಡಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಸಮಾಜ ಸೇವಕ ಗಿರೀಶ್, ಗಾಣಿಗ ಜನಾಂಗದ ಶಿವಮಲ್ಲಶೆಟ್ಟಿ, ಲಿಂಗಾಯತ ಶೆಟ್ಟಿ ಜನಾಂಗದ ಮುರುಘೇಂದ್ರ ಸ್ವಾಮಿ, ಮೊದಲಿಯರ್ ಜನಾಂಗದ ಎಚ್.ಎನ್.ಮಹೇಶ್, ವಿಶ್ವಕರ್ಮ ಜನಾಂಗದ ಎಚ್.ಎಸ್.ಕುಮಾರ್, ವೀರಶೈವ ಸಮಾಜದ ಮುಖಂಡ ಲೋಕೇಶ್, ಮಂಜುನಾಥ್, ಸುಬ್ಬಣ್ಣ, ನಿವೃತ್ತ ಮುಖ್ಯ ಶಿಕ್ಷಕ ಎಚ್.ಎಸ್.ನಟರಾಜು, ಸುಬ್ಬಮ್ಮ, ಶಕುಂತಲಮ್ಮ, ರತ್ನಮ್ಮ, ಸುಲೋಚನಾ ಹಾಜರಿದ್ದರು.