ಸ್ಮಶಾನ ಸ್ವಚ್ಛ, ಸುಂದರವಾಗಿಟ್ಟುಕೊಳ್ಳಿ

25Kagwad1
ಪರಮೇಶ್ವರವಾಡಿಗೆ ಸ್ಮಶಾನ ಭೂಮಿಯನ್ನು ಉಗಾರ ಬುದ್ರುಕ ಗ್ರಾಪಂಗೆ ಹಸ್ತಾಂತರಿಸಲಾಯಿತು. ಶಾಸಕ ಶ್ರೀಮಂತ ಪಾಟೀಲ, ಬಾಹುಸಾಬ ನಾಯಕ, ನಾಗೇಂದ್ರ ನಾಯಕ, ವೀರಣ್ಣಗೌಡ ಏಗಣಗೌಡರ, ಅಪ್ಪಾಸಾಬ ಚೌಗಲೆ, ಮನೋಜ ಕುಸನಾಳೆ, ಜೈಪಾಲ ಸಾಂಗವಾಡೆ ಇತರರಿದ್ದರು.
Published on

ಕಾಗವಾಡ: ಸ್ಮಶಾನ ಭೂಮಿ ಒಂದು ಪವಿತ್ರ ಭೂಮಿ. ಅದನ್ನು ಎಲ್ಲರೂ ಸೇರಿ ಸ್ವಚ್ಛ, ಸುಂದರವಾಗಿಟ್ಟುಕೊಂಡು ಅದರ ಪಾವಿತ್ರ್ಯ ಕಾಪಾಡಿ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು. ತಾಲೂಕಿನ ಉಗಾರ ಬದ್ರುಕ ಗ್ರಾಮದ ಪರಮೇಶ್ವರವಾಡಿ ಗ್ರಾಮ ಪಂಚಾಯಿತಿಗೆ ಸೋಮವಾರ ಸ್ಮಶಾನ ಭೂಮಿ ಹಸ್ತಾಂತರಿಸಿ ಮಾತನಾಡಿದ ಅವರು, ಸ್ಮಶಾನ ಭೂಮಿಗೆ ಬೇಕಾದ ಎಲ್ಲ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ತಹಸೀಲ್ದಾರ ರಾಜೇಶ್ ಬುರ್ಲಿ ಹಾಗೂ ಗ್ರಾಪಂ ಅಧ್ಯಕ್ಷ ಅಣ್ಣಾಗೌಡ ಪಾಟೀಲ ಮಾತನಾಡಿ, ಅನೇಕ ವರ್ಷಗಳಿಂದ ಬೇಡಿಕೆಯಾಗಿದ್ದ ಪರಮೇಶ್ವರವಾಡಿ ಗ್ರಾಮದ ಸ್ಮಶಾನ ಭೂಮಿ ಕಾರ್ಯ ಇದೀಗ ಪೂರ್ಣಗೊಂಡಿದೆ ಎಂದು ಹೇಳಿದರು.

ಭೂಮಿ ದಾನ ಮಾಡಿದ ಬಾಹುಸಾಬ ನಾಯಕ, ನಾಗೇಂದ್ರ ನಾಯಕ, ಸದಾಶಿವ ನಾಯಕ, ಭರಮು ನಾಯಕ, ಪದ್ಮಣ್ಣ ನಾಯಕ, ಪೀರಪ್ಪ ನಾಯಕ ಅವರನ್ನು ಸತ್ಕರಿಸಲಾಯಿತು. ತಾಪಂ ಇಒ ವೀರಣ್ಣಗೌಡ ಏಗಣಗೌಡರ, ವಲಯ ಅರಣ್ಯಾಧಿಕಾರಿ ಪ್ರಶಾಂತ ಗಂಗಾಧರ, ಉಪತಹಸೀಲ್ದಾರ್ ಅಣ್ಣಾಸಾಬ ಕೋರೆ, ಕಂದಾಯ ನಿರೀಕ್ಷಕ ಮುಲ್ಲಾ, ಗ್ರಾಪಂ ಸದಸ್ಯರಾದ ಅಪ್ಪಾಸಾಬ ಚೌಗಲೆ, ಮನೋಜ ಕುಸನಾಳೆ, ಜೈಪಾಲ ಸಾಂಗವಾಡೆ, ಪಿಡಿಒ ಬಾಬು ಐತವಾಡೆ, ಭರತ ಹೊಸುರೆ, ನಜೀರ್ ಪಠಾಣ, ಅಪ್ಪಾಸಾಬ ಸವದಿ, ದಾದಾ ಚೌಧರಿ, ಮುದ್ದು ಮುಲ್ಲಾ, ಶ್ರಾವಣ ಗೊಂಧಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net