ಸ್ಮಶಾನ ಭೂಮಿ ವಿವಾದ ಪರಿಹರಿಸಿ

21KAGWAD3
Published on

ಕಾಗವಾಡ: ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿರುವ ತಾಲೂಕಿನ ಜುಗೂಳ ಗ್ರಾಮದ ಪರಿಶಿಷ್ಟ ಜಾತಿ ಸ್ಮಶಾನ ಭೂಮಿ ವಿವಾದವನ್ನು ಕೂಡಲೇ ಪರಿಹರಿಸಿ, ಇಲ್ಲವಾದರೆ ಜೂ.೪ರಿಂದ ತಹಸೀಲ್ದಾರ್ ಕಾರ್ಯಾಲಯದ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಎಚ್ಚರಿಸಿದರು.

ದಲಿತ ಸಂಘರ್ಷ ಸಮಿತಿ (ಭೀಮವಾದ)ದ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಸಿದ್ಧಾರ್ಥ ಶಿಂಗೆ ನೇತೃತ್ವದಲ್ಲಿ ತಹಸೀಲ್ದಾರ್ ರಾಜೇಶ ಬುರ್ಲಿ, ತಾಪಂ ಇಒ ವೀರಣ್ಣ ವಾಲಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಸಮುದಾಯದ ಯಾರಾದರೂ ಮೃತಪಟ್ಟು ಅಂತ್ಯಕ್ರಿಯೆಗೆ ಅವಕಾಶ ಸಿಗದಿದ್ದರೆ, ಜುಗೂಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿ (ಭೀಮವಾದ)ದ ರಾಜ್ಯ ಸಂಘಟನಾ ಸಂಚಾಲಕ ಸಂಜು ಕಾಂಬಳೆ, ವೆಂಕಟೇಶ ಕಾಂಬಳೆ, ವಿಶಾಲ ದೊಂಡಾರೆ, ಪ್ರಮೋದ ಕಾಂಬಳೆ, ರಾಹುಲ ಕಾಂಬಳೆ, ಪ್ರತಾಪ ಕಾಂಬಳೆ, ಮಹಾದೇವ ಕಾಂಬಳೆ, ರವಿ ಐಹೊಳೆ, ದೀಪಕ ಪಾಖರೆ, ಅರ್ಜುನ ಅಧೋಕೆ, ತುಕಾರಾಮ ಕಾಂಬಳೆ, ಸಾಗರ ಕಾಂಬಳೆ, ನಾರಾಯಣ ಮಾನೆ, ಪೋಪಟ್ ಕಾಂಬಳೆ, ಗೋಪಾಲ ಕಾಂಬಳೆ, ವಿಜಯ ಹಿರೇಮನಿ, ವಿದ್ಯಾಧರ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net