ಸ್ಮಶಾನ ಭೂಮಿ ಕಲ್ಪಿಸಲು ಮನವಿ

0201
Published on

ಬೆಳಗಾವಿ: ಸಮೀಪದ ಕಣಬರ್ಗಿಯ ಮುಸ್ಲಿಂ ಸಮುದಾಯದ ಜನರಿಗೆ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಜುಮ್ಮಾ ಮಸೀದ್​ ಸುನಿ ಸಂಟನೆ ನೇತೃತ್ವದಲ್ಲಿ ಗ್ರಾಮದ ಮುಸ್ಲಿಂ ಸಮುದಾಯದ ಮುಖಂಡರು ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು.

ಬೆಳಗಾವಿ ನಗರದ ಸಮೀಪದಲ್ಲಿರುವ ಕಣಬರ್ಗಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಸುಮಾರು 5 ಸಾವಿರ ಜನರು ಪ್ರಸ್ತುತ ವಾಸವಿದ್ದಾರೆ. 120 ವರ್ಷಗಳ ಹಿಂದೆ ಮುಸ್ಲಿಂ ಸಮುದಾಯಕ್ಕೆ ನೀಡಿದ ಸ್ಮಶಾನ ಭೂಮಿಯು ಸದರಿ ೂರಿಗಳಿಂದ ತುಂಬಿದೆ. ಇದರಿಂದ ಮುಂದಿನ ಅಂತ್ಯಕ್ರಿಯೆಗಳಿಗೆ ಸ್ಥಳಾವಕಾಶವಿಲ್ಲದಂತಾಗಿದೆ.

ಕಣಬರ್ಗಿ ಗ್ರಾಮದಲ್ಲಿ ಮಹಾನಗರ ಪಾಲಿಕೆಗೆ ಸಂಬಂಧಿಸಿದ 5 ಎಕರೆಗೂ ಹೆಚ್ಚಿನ ಜಾಗವಿದ್ದು, ಸದರಿ ಜಾಗದಲ್ಲಿಯೇ ಸ್ಮಶಾನ ನಿರ್ಮಾಣಕ್ಕೆ ಅವಕಾಶ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕಣಬರ್ಗಿಯ ಜುಮ್ಮಾ ಮಸೀದಿ ಸುನಿ ಸಂದ ಅಧ್ಯ ಜಿ.ಎಫ್​.ರಾಜಗೋಳ, ಉಪಾಧ್ಯ ಅಬ್ದುಲ್​ ಮಜೀದ ಮುಲ್ಲಾ, ಮಾಜಿ ನಗರ ಸೇವಕ ಬೈರಗೌಡ ಪಾಟೀಲ, ಕಾರ್ಯದರ್ಶಿ ಆರೀಫ್​ ಮುಲ್ಲಾ, ಖಜಾಂಚಿ ಹನೀಫ್​ ಮುಲ್ಲಾ, ಇಮಾಮಸಾಬ್​ ಮುಲ್ಲಾ, ಶಬೀರ ಕಾಕತೀಕರ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net