

ಕಾನಹೊಸಹಳ್ಳಿ: ಚಿಕ್ಕಜೋಗಿಹಳ್ಳಿ ಹೊರವಲಯದಲ್ಲಿರುವ ಸ್ಮಶಾನ ಸ್ಥಳಕ್ಕೆ ಕೂಡ್ಲಿಗಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ವಿವಿಧ ಹಳ್ಳಿಗಳಲ್ಲಿರುವ ಸ್ಮಶಾನ ಜಮೀನನ್ನು ಅತಿಕ್ರಮಣ ಮಾಡಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸ್ಮಶಾನ ಜಮೀನು ಸರ್ವೇ ಮಾಡಿಸಿ ಗ್ರಾಪಂಗೆ ವಹಿಸಲಾಗುವುದು. ತಾಲೂಕಿನ ಹಲವಾರು ಹಳ್ಳಿಗಳ ಸ್ಮಶಾನ ಸ್ವಾಧೀನಕ್ಕೆ ಪಡೆದು ಗ್ರಾಪಂಗೆ ಅಭಿವೃದ್ಧಿ ಪಡಿಸಲು ಸೂಚಿಸಲಾಗಿದೆ. ಚಿಕ್ಕಜೋಗಿಹಳ್ಳಿ ಸ್ಮಶಾನದ ಸರ್ವೇ ಕಾರ್ಯ ಮಾಡಲಾಗಿದ್ದು, ಮತ್ತೊಮ್ಮೆ ಸರ್ವೇ ಮಾಡಿಸುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ಬಂದಿರುವೆ. ಒಂದು ವಾರದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಗ್ತಾಮಾಡಳಿತ ಅಧಿಕಾರಿ ಮರುಳಸಿದ್ದಪ್ಪ, ತಾಲೂಕು ಸರ್ವೇ ಅಧಿಕಾರಿ ನವೀನಕುಮಾರ್, ಅಂಜಿನಪ್ಪ, ತಿಪ್ಪೇಶಿ ಇದ್ದರು.