

ಶ್ರೀರಂಗಪಟ್ಟಣ: ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿನ ಪಾಕಶಾಲೆ ನಿರ್ಮಾಣ ಹಾಗೂ ಸ್ಮಶಾನ ಅಭಿವೃದ್ಧಿಗಾಗಿ ಸಂಸದರ ನಿಯ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಲಾಯಿತು.
ಗ್ರಾಮದ ಯಜಮಾನರಾದ ಬೆಟ್ಟೇಗೌಡ, ಶ್ರೀಕಂಠಯ್ಯ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದೇವರಾಜು, ಎಪಿಎಂಸಿ ಮಾಜಿ ನಿರ್ದೇಶಕ ಕೆ.ಬಿ.ಮಹೇಶ್ ಅವರು ಕಾಮಗಾರಿಗೆ ಚಾಲನೆ ನೀಡಿದರು.
ಸಂಸದೆ ಸುಮಲತಾ ಅಂಬರೀಷ್ ಅವರ ಆಪ್ತ ಬೆಂಬಲಿಗ ಯುವ ಮುಖಂಡ ದರ್ಶನ್ ಲಿಂಗರಾಜು ಮಾತನಾಡಿ, ಗ್ರಾಮದ ಭವನದಲ್ಲಿ ಸಮಾರಂಭ ನಡೆಸುವ ಜನರ ಉಪಯೋಗಕ್ಕೆ 3 ಲಕ್ಷ ರೂ. ವೆಚ್ಚದಲ್ಲಿ ವಿಶಾಲವಾದ ಪಾಕಶಾಲೆ ಹಾಗೂ ಅಂತಿಮ ಕಾರ್ಯ ನಡೆಸಲು ಸಶ್ಮಾನಕ್ಕೆ ಆಗಮಿಸುವ ಜನರಿಗೆ 2 ಲಕ್ಷ ರೂ. ವೆಚ್ಚದಲ್ಲಿ ಮಳೆ-ಬಿಸಿಲಿನಿಂದ ರಕ್ಷಣೆಗಾಗಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಜತೆಗೆ ನೆರಳಿನ ಸೂರು ನಿರ್ಮಾಣಕ್ಕಾಗಿ ಸಂಸದೆ ಸುಮಲತಾ ಅಂಬರಿಷ್ ಅವರು ಸಂಸದರ ನಿಯಿಂದ ಅನುದಾನ ನೀಡಿದ್ದು, ಗುಣಮಟ್ಟದ ಕಾಮಾಗಾರಿಗೆ ಸೂಚಿಸಲಾಗಿದೆ ಎಂದರು. ಯುವ ಮುಖಂಡರಾದ ಮುರುಳಿ, ಟಿ.ಮಹೇಶ್, ಚಂದ್ರಶೇಖರ್ ಇದ್ದರು.