ಸ್ಮತಿ ದಿವಸ ಪಂಜಿನ ಮೆರವಣಿಗೆ

14 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಅಖಂಡ ಭಾರತ ನಿರ್ಮಾಣ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಪಂಜಿನ ಮೆರವಣಿಗೆ ನಡೆಸಲಾಯಿತು.
ಬಿಜೆಪಿ ಜಿಲ್ಲಾ ಕಚೇರಿಯಿಂದ ಆರಂಭವಾದ ಮೆರವಣಿಗೆ ವಿವೇಕಾನಂದ ವೃತ್ತ, ಸಿಬಿಟಿ, ಹಳೇ ಬಸ್ ನಿಲ್ದಾಣ, ಟಿಕಾರೆ ರಸ್ತೆ ಮಾರ್ಗವಾಗಿ ಗೋಪಾಲಕೃಷ್ಣ ಮಂಗಲ ಕಾರ್ಯಾಲಯದಲ್ಲಿ ಸಂಪನ್ನಗೊಂಡಿತು. ಬಿಜೆಪಿ ಮುಖಂಡರು ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.
ಶಾಸಕ ಅರವಿಂದ ಬೆಲ್ಲದ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಮಾಜಿ ಮೇಯರ್ ಈರೇಶ ಅಂಚಟಗೇರಿ, ವಿನಾಯಕ ತಲಗೇರಿ, ಶ್ರೀನಿವಾಸ ಕೋಟ್ಯಾನ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net